ರಾಷ್ಟ್ರೀಯ

ಮೊಸಳೆ ಬಾಯಿಯಿಂದ ಪಾರಾಗಿ ಬಂದ ಮಹಿಳೆ..!

Pinterest LinkedIn Tumblr

mosaleಕೇಂದ್ರಪಾರಾ(ಒರಿಸ್ಸಾ),ಆ.೧- ಸಾಮಾನ್ಯವಾಗಿ ಮೊಸಳೆ ಬಾಯಿಗೆ ಸಿಕ್ಕ ಯಾವ ಪ್ರಾಣಿಯೂ ಬದುಕಿ ಬರುವುದು ಕಷ್ಟ. ಆದರೆ ಇಲ್ಲಿ ಮಹಿಳೆಯೊಬ್ಬಳು ತನ್ನನ್ನು ಹಿಡಿದುಕೊಂಡ ಮೊಸಳೆಯೊಂದಿಗೆ ಸೆಣಸಿ ಸಾವಿನ ದವಡೆಯಿಂದ ಪಾರಾಗಿ ಬಂದು ಸಾಹಸ ಮೆರೆದಿದ್ದಾಳೆ.

ರಾಜ್‌ಕನಿಕ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಿರಿ ಗ್ರಾಮದ ೩೭ ವರ್ಷದ ಮಹಿಳೆ ಸಾವಿತ್ರಿ ಸಮಾಲ್ ಮೊಸಳೆ ಬಾಯಿಯಿಂದ ಪಾರಾಗಿ ಬಂದಿದ್ದು , ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.  ನಿನ್ನೆ ಮನೆ ಬಳಿಯ ಹಳ್ಳದಲ್ಲಿ ಪಾತ್ರೆತೊಳೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಧಾವಿಸಿ ಬಂದ ಮೊಸಳೆ ನನ್ನ ಹಿಡಿಯಿತು.

ಆಗ ಏನು ಮಾಡಬೇಕೆಂಬುದೇ ತೋಚಲಿಲ್ಲ. ನಾನು ತೊಳೆಯಲು ತಂದಿದ್ದ ಮುದ್ದೆ ಕೋಲು ತೆಗೆದುಕೊಂಡು ಅದರ ಮುಖದ ಮೇಲೆ ಹೊಡೆದು, ಪವಾಡ ಸದೃಶ್ಯವಾಗಿ ಬಿಡಿಸಿಕೊಂಡು ಬಂದೆ ಎಂದು ಸಾವಿತ್ರಿ ಹೇಳಿದ್ದಾಳೆ.ಸ್ವಲ್ಪ ನಿಧಾನಿಸಿದ್ದರೂ ಅದು ನನ್ನ ನೀರಲ್ಲಿ ಮುಳುಗಿಸಿಬಿಡುತ್ತಿತ್ತು. ನನಗೆ  ಆಗ ಬಂದ ಹುಚ್ಚು ಧೈರ್ಯ ನನ್ನ ಜೀವ ಕಾಪಾಡಿತು ಎಂದು ಆಕೆ ಹೇಳಿದ್ದಾಳೆ.

Write A Comment