ರಾಷ್ಟ್ರೀಯ

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಅಸಾರಾಂ ಬಾಪು ರಾಜಸ್ಥಾನ ಶಾಲಾ ಪಠ್ಯದಲ್ಲಿ ಶ್ರೇಷ್ಠ ಸಂತ

Pinterest LinkedIn Tumblr

asaram-bapu

ಜೋಧಪುರ: ರಾಜಸ್ಥಾನದ ಶಾಲಾ ಪಠ್ಯ ಪುಸ್ತಕದಲ್ಲಿ ಅತ್ಯಾಚಾರ ಪ್ರಕರಣ ಸಂಬಂಧ ಜೈಲು ಸೇರಿರುವ ಅಸಾರಾಂ ಬಾಪು ಚಿತ್ರವನ್ನು ದೇಶದ ಪ್ರಸಿದ್ಧ ಸಂತರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಸ್ವಯಂ ಘೋಷಿತ ದೇವನ ಮಾನವನ ಚಿತ್ರವನ್ನು ಮೂರನೇ ತರಗತಿಯ ನೈತಿಕ ಶಿಕ್ಷಣದ ಪಠ್ಯ ಪುಸ್ತಕದಲ್ಲಿ ಶ್ರೇಷ್ಠ ಸಂತರ ಪಟ್ಟಿಗೆ ಸೇರಿಸಲಾಗಿದೆ. ದಿಲ್ಲಿ ಮೂಲದ ಗುರುಕುಲ ಪ್ರಕಾಶನದ ‘ನಯಾ ಉಜಾಲಾ’ ಪುಸ್ತಕದಲ್ಲಿ ಈ ವಿವಾದಾತ್ಮಕ ಅಂಶ ಪ್ರಕಟವಾಗಿದೆ.
1997 -2006ರ ಸಮಯದಲ್ಲಿ ಗುಜರಾತ್‌ನಲ್ಲಿರುವ ಆಶ್ರಮದಲ್ಲಿ ತಂಗಿದ್ದ ವೇಳೆ, ಅಸಾರಾಂ ಬಾಪು ಅತ್ಯಾಚಾರ ಎಸಗಿದ್ದರು. ಆಶ್ರಮ ಬಿಟ್ಟು ಹೋಗದಂತೆ ನಮ್ಮಿಬ್ಬರಿಗೂ (ಸೋದರಿಯರು) ಬಿಗಿ ಕಾವಲು ಹಾಕಲಾಗಿತ್ತು ಎಂದು ಸೂರತ್ ಮೂಲದ ಸಂತ್ರಸ್ತೆ ದೂರಿದ್ದರು.

ಜೋಧ್‌ಪುರದ ಆಶ್ರಮದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ಅಸಾರಾಂ ಬಾಪು ಬಂಧಿತರಾಗಿದ್ದಾರೆ.

Write A Comment