ಭಾರತದಲ್ಲಿ ಇನ್ನು ಮುಂದೆ ಅಶ್ಲೀಲ ಚಿತ್ರ ವೀಕ್ಷಣೆಗೆ ಕಡಿವಾಣ ಹಾಕಲಾಗುತ್ತಿದೆ. ಶನಿವಾರದಿಂದ ದೇಶ- ವಿದೇಶಗಳ ಅಶ್ಲೀಲ ವೆಬ್ ಸೈಟ್ ಗಳಿಗೆ ಅನಧಿಕೃತವಾಗಿ ಬ್ರೇಕ್ ಹಾಕಲಾಗಿದೆ ಎನ್ನಲಾಗಿದೆ.
ಬಿ.ಎಸ್.ಎನ್.ಎಲ್., ವೋಡಾಫೋನ್ ಇಂಟರ್ನೆಟ್ ಬಳಕೆದಾರರು ಅಶ್ಲೀಲ ಚಿತ್ರ ವೀಕ್ಷಿಸಲು ಇಂತಹ ವೆಬ್ ಸೈಟ್ ಪ್ರವೇಶಿಸಲು ಟೈಪ್ ಮಾಡಿದ ವೇಳೆ “Your requested URL has been blocked as per directions received from Department of Telecommunications” ಎಂಬ ಸಂದೇಶ ಬಂದಿದೆ.
ಅಶ್ಲೀಲ ವೆಬ್ ಸೈಟ್ ನಿರ್ಬಂಧಿಸಿ ಕೇಂದ್ರ ಸರ್ಕಾರ ಅಧಿಕೃತವಾಗಿ ಯಾವುದೇ ಆದೇಶ ಹೊರಡಿಸಿಲ್ಲವಾದರೂ ಅಶ್ಲೀಲ ವೆಬ್ ಸೈಟ್ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಆದರೆ ಏರ್ ಟೆಲ್ ಬಳಕೆದಾರರು ಹಾಗೂ ಮೊಬೈಲ್ ನಲ್ಲಿ ಇಂಟರ್ನೆಟ್ ವೀಕ್ಷಿಸುವವರು ಅಶ್ಲೀಲ ವೆಬ್ ಸೈಟ್ ವೀಕ್ಷಿಸಲು ಯಾವುದೇ ತೊಂದರೆಯಾಗಿಲ್ಲ.
ಆನೇಕ ದೇಶಗಳಲ್ಲಿ ಅಶ್ಲೀಲ ವೆಬ್ ಸೈಟ್ ಗಳಿಗೆ ನಿರ್ಬಂಧವಿದ್ದು ಭಾರತದಲ್ಲೂ ಇದನ್ನು ನಿಷೇಧಿಸಬೇಕೆಂದು ಕಮಲೇಶ್ ವಾಸ್ವಾನಿ ಎಂಬ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ ಕೇಂದ್ರ ಸರ್ಕಾರ ಈ ಕುರಿತು ಯಾವುದೇ ಆದೇಶ ಹೊರಡಿಸಿಲ್ಲವೆಂದು ಅವರ ಅರ್ಜಿಯನ್ನು ತಳ್ಳಿ ಹಾಕಲಾಗಿತ್ತು. ಕೇಂದ್ರ ಸರ್ಕಾರ ಈಗ ಅಶ್ಲೀಲ ವೆಬ್ ಸೈಟ್ ನಿರ್ಬಂಧಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ.