ಉಗ್ರರ ಹಿಮ್ಮೆಟ್ಟಿಸುವ ಮೂಲಕ ಭಾರತದಲ್ಲಿ ಶಾಂತಿ ಪ್ರಕ್ರಿಯೆಗೆ ಮುಂದಾಗಬಹುದು ಎಂಬ ಸಾರ್ವಜನಿಕರ ದೃಷ್ಟಿಕೋನವನ್ನು ನಾಗಲ್ಯಾಂಡ್ ನ ಉಗ್ರವಾದಿ ಸಂಘಟನೆ ಜತೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಪ್ರಧಾನಿ ಮೋದಿ ಹುಸಿಗೊಳಿಸಿದ್ದಾರೆ.
ಹೌದು. ದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸ 7 ಆರ್ಸಿಆರ್ ನಲ್ಲಿ ಎನ್ಎಸ್ ಸಿಎನ್(ಐಎಂ) ಮುಖ್ಯಸ್ಥ ಟಿ. ಮುಇವಾ ಜತೆ ಶಾಂತಿಯುತ ಮಾತುಕತೆ ನಡೆಸಿ ನಂತರ ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿರುವ ಪ್ರಧಾನಿ ಮೋದಿ ಈ ಸಮಯದಲ್ಲಿ ಉಗ್ರರ ಜತೆಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಿ ಅಚ್ಚರಿಗೆ ಕಾರಣರಾದರು.
ಮೊದಲಿಗೆ ಈಶಾನ್ಯ ರಾಜ್ಯಗಳಲ್ಲಿ ಅಬ್ಬರಿಸುತ್ತಿರುವ ಉಗ್ರ ಸಂಘಟನೆಗಳನ್ನು ಮಟ್ಟಹಾಕಲು ಮುಂದಾಗಿದ್ದ ಕೇಂದ್ರ ಸರ್ಕಾರ ಎನ್‌ಎಸ್‌ಸಿಎನ್ ಉಗ್ರ ಸಂಘಟನೆಗೆ ಮಣಿಪುರದ ಚಾಂದೇಲ್‌ನಲ್ಲಿ 20 ಭಾರತೀಯ ಯೋಧರ ಹತ್ಯೆ ನಡೆಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದ್ದು ಈ ಸಮಯದಲ್ಲಿ ಪಕ್ಷದ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವಾ ಮನೋಹರ್ ಪರಿಕ್ಕರ್ ಭಾಗಿಯಾಗಿದ್ದರು ಎಂಬ ಮಾಹಿತಿ ಲಭಿಸಿದೆ.
ಅಲ್ಲದೇ ಈ ಶಾಂತಿ ಮಾತುಕತೆಯಲ್ಲಿ ಗ್ರೇಟರ್ ನಾಗಲ್ಯಾಂಡ್ ಗೆ ಬೇಡಿಕೆ ಇಟ್ಟಿದ್ದ ಎನ್ಎಸ್ ಸಿಎನ್(ಐಎಂ) ಮುಖ್ಯಸ್ಥ ಟಿ. ಮುಇವಾ ನಾಗಲ್ಯಾಂಡ್ ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರ ಬಗ್ಗೆ ಅಪಾರ ಗೌರವಿದೆ ಎನ್ನುವ ಮೂಲಕ ತಾವೂ ಶಾಂತಿ ಕಾಪಾಡಲು ಬದ್ದ ಎಂಬ ಸೂಚನೆ ನೀಡಿದರು.