ರಾಷ್ಟ್ರೀಯ

ಭೂ ಸ್ವಾಧೀನ ಕಾಯ್ದೆ: ವಿವಾದಾತ್ಮಕ ತಿದ್ದುಪಡಿ ಕೈ ಬಿಟ್ಟ ಮೋದಿ ಸರಕಾರ

Pinterest LinkedIn Tumblr

raitaಹೊಸದಿಲ್ಲಿ: ಕಳೆದ ವರ್ಷ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮೋದಿ ಸರಕಾರ ಯತ್ನಿಸಿದ್ದ ಭೂ ಸ್ವಾಧೀನ ವಿಧೇಯಕ ತಿದ್ದುಪಡಿಗಳನ್ನು ಕೈ ಬಿಡಲು ನಿರ್ಧರಿಸಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಸೂಚಿಸಿದ ಪ್ರಮುಖ ಅಂಶಗಳನ್ನು ಸೇರಿಸಲು ಒಪ್ಪಿಗೆ ಸೂಚಿಸಿದೆ.

ಸಂಸತ್ತಿನ ಜಂಟಿ ಸಮಿತಿಯ ಎಲ್ಲ ಹನ್ನೊಂದು ಬಿಜೆಪಿ ಸದಸ್ಯರೂ ಸಾಮಾಜಿಕ ಪರಿಣಾಮಗಳ ನಿರ್ಣಯ ಮತ್ತು ಅನುಮೋದನಾ ಕಲಂ ತಿದ್ದುಪಡಿಯನ್ನು ಪುನಃ ಸೇರಿಸಲು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ, ಎಂದು ಮೂಲಗಳು ತಿಳಿಸಿವೆ.

ವಿಧೇಯಕಕ್ಕೆ ಸಂಬಂಧಿಸಿದಂತೆ ಬಿಜೆಪಿ ತನ್ನ ನಿಲುವನ್ನು ಸಡಿಲಿಸಿದ್ದು, ಬಿಜೆಪಿ ಸಂಸದ ಎಸ್.ಎಸ್.ಅಹ್ಲುವಾಲಿಯಾ ನೇತೃತ್ವದ ಸಮಿತಿ ಆಗಸ್ಟ್ 7ರಂದು ಸಮ್ಮತಿ ವರದಿ ನೀಡುವ ಸಾಧ್ಯತೆ ಇದೆ.

‘ಆಡಳಿತ ಪಕ್ಷ ತಿದ್ದುಪಡಿಗೆ ಸಂಬಂಧಿಸಿದಂತೆ ಸಂಪೂರ್ಣ ಒಪ್ಪಿಗೆ ಸೂಚಿಸಿರುವುದು ಒಳ್ಳೆಯ ನಡೆ,’ ಎಂದು ಸಮಿತಿಯ ಕಾಂಗ್ರೆಸ್ ಸದಸ್ಯರು ಹೇಳಿದ್ದಾರೆ.

ಎನ್‌ಡಿಎ ಸರಕಾರ ತಿದ್ದುಪಡಿ ತರಲು ಮುಂದಾಗಿದ್ದ 15ರಲ್ಲಿ ಒಂಬತ್ತು ಅಂಶಗಳಿಗೆ ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು.

ಸಮ್ಮತಿ ಕಲಂ, ಸಾಮಾಜಿಕ ಪರಿಣಾಮದ ನಿರ್ಣಯ, ಖಾಸಗಿ ಕಂಪನಿ (private company) ಎಂಬ ಪದದ ಬದಲು ಖಾಸಗಿ ಅಸ್ತಿತ್ವ (private entity)ಎಂಬ ಪದ ಬಳಸುವ ಬಗ್ಗೆ ಸೋಮವಾರ ನಡೆದ ಸಭೆಯಲ್ಲಿ ಚರ್ಚಿಸಿ, ಒಮ್ಮತಕ್ಕೆ ಬರಲಾಯಿತು, ಎಂದು ಕಾಂಗ್ರೆಸ್ ಸದಸ್ಯರು ಹೇಳಿದ್ದಾರೆ.

Write A Comment