ರಾಷ್ಟ್ರೀಯ

ಬಾಲಕಿ, ಬಾಲಕಿಯನ್ನೇ ಮದುವೆಯಾದ ಕಥೆ !

Pinterest LinkedIn Tumblr

maduve9 ನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ಬಾಲಕಿಯರು ಗುಪ್ತವಾಗಿ ಮದುವೆಯಾಗಿ ಮನೆ ಬಿಟ್ಟು ಓಡಿ ಹೋದ ವಿಚಿತ್ರ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.

ಹೌದು. ಈ ಇಬ್ಬರು ಹುಡುಗಿಯರು ಪರಸ್ಪರ ಪ್ರೀತಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಗುಪ್ತವಾಗಿ ಮದುವೆಯಾಗಿದ್ದಲ್ಲದೇ ಉತ್ತರ ಪ್ರದೇಶಕ್ಕೆ ಓಡಿ ಹೋಗಿದ್ದರು ಎನ್ನಲಾಗಿದೆ. ಆದರೆ ಇವರಿಬ್ಬರ ವರ್ತನೆ ನೋಡಿದ ಕುಶಿ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ವಿಷಯ ಬಯಲಾಗಿದೆ.

ಅಲ್ಲದೇ ಈ ಬಾಲಕಿಯರನ್ನು ಅಪಹರಿಸಲಾಗಿದೆ ಎಂದು ಪತ್ತೆಗೆ ಮುಂದಾಗಿದ್ದ ಪೊಲೀಸರು ದಂಗಾಗಿದ್ದು ಇಬ್ಬರನ್ನೂ ವಶಕ್ಕೆ ಪಡೆದಿದ್ದು ಸಲಿಂಗ ಕಾಮದ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವುದಾಗಿ ತಿಳಿಸಿದ್ದಾರೆ.

Write A Comment