ರಾಷ್ಟ್ರೀಯ

ಜಮ್ಮು ಕಾಶ್ಮೀರದಲ್ಲಿ ಪಾಕ್‌ ಗುಂಡಿನ ದಾಳಿಗೆ ಒಬ್ಬ ನಾಗರಿಕ ಬಲಿ

Pinterest LinkedIn Tumblr

ceasefire violation

ಜಮ್ಮು: ಜಮ್ಮು ಕಾಶ್ಮೀರದ ಪರಗ್ವಾಲ್‌ ವಲಯದಲ್ಲಿ ಪಾಕಿಸ್ತಾನಿ ಪಡೆಗಳು ಹಾರಿಸಿದ ಗುಂಡಿಗೆ ಒಬ್ಬ ನಾಗರಿಕ ಬಲಿಯಾದ ಬಗ್ಗೆ ಟೈಮ್ಸ್ ನೌ ಮಂಗಳವಾರ ವರದಿ ಮಾಡಿದೆ.

ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ, ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿರುವ 12 ಔಟ್ ಪೋಸ್ಟ್‌ಗಳ ಮೇಲೆ ಪಾಕಿಸ್ತಾನಿ ಪಡೆಗಳು ಶೆಲ್‌ ದಾಳಿ ನಡೆಸಿವೆ.

ಪಾಕ್‌ ದಾಳಿಗೆ ಬಿಎಸ್‌ಎಫ್‌ ಪಡೆಗಳು ತಿರುಗೇಟು ನೀಡಿದ್ದು, ಗಡಿ ಭಾಗದಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ.

‘ಜಮ್ಮುವಿನ ಪರಗ್ವಾಲ್‌ ಹಾಗೂ ಕನಾಚಕ್ ವಲಯದ ಗಡಿ ಭದ್ರತಾ ಠಾಣೆಯನ್ನು ಗುರಿಯಾಗಿಸಿಕೊಂಡು ಬೆಳಗ್ಗೆ 5.40ಕ್ಕೆ ಪಾಕಿಸ್ತಾನಿ ಪಡೆಗಳು ಗುಂಡಿನ ದಾಳಿ ನಡೆಸಿದವು,’ ಎಂದು ಬಿಎಸ್‌ಎಫ್‌ ವಕ್ತಾರರು ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿ ಪಾಕಿಸ್ತಾನಿ ಪಡೆಗಳು ನಡೆಸಿರುವ 8ನೇ ಕದನ ವಿರಾಮ ಒಪ್ಪಂದ ಉಲ್ಲಂಘನೆ ಪ್ರಕರಣವಿದು. ಜುಲೈನಿಂದೀಚೆಗೆ ಪಾಕ್‌ ಪಡೆಗಳ 18 ಕದನ ವಿರಾಮ ಒಪ್ಪಂದ ಉಲ್ಲಂಘನೆಯಿಂದ ಮೂವರು ಯೋಧರು ಸೇರಿದಂತೆ ನಾಲ್ಕು ಮಂದಿ ಮೃತಪಟ್ಟಿದ್ದು, ಇತರ 14 ಮಂದಿ ಗಾಯಗೊಂಡಿದ್ದಾರೆ.

Write A Comment