ನವದೆಹಲಿ: ಇತ್ತೀಚೆಗಷ್ಟೆ ಇಸ್ಲಾಮಿಕ್ ಸ್ಟೇಟ್ ಉಗ್ರರು ಅಪಹೃತ ಕನ್ನಡಿಗರನ್ನು ಬಿಡುಗಡೆ ಮಾಡಿದ್ದು, ಇದರ ಬೆನ್ನಲ್ಲೇ ಇದೀಗ ಹೈದ್ರಾಬಾದ್ ಮೂಲದ ಗೋಪಿಕೃಷ್ಣ ಮತ್ತು ಬಲರಾಮ್ ಅವರನ್ನು ಇಸಿಸ್ ಉಗ್ರರು ಬಿಡುಗಡೆಗೊಳಿಸಿದ್ದಾರೆ.
ಟ್ರೈಪೊಲಿಯ ಸಿರ್ತೆ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಭಾರತೀಯರನ್ನು ಇಸಿಸ್ ಉಗ್ರರು ಅಪಹರಿಸಿದ್ದರು. ಬಳಿಕ ತಾವು ಅಪಹರಿಸಿರುವುದು ಪ್ರಾಧ್ಯಾಪಕರೆಂದು ತಿಳಿದು ಮೊದಲ ಕರ್ನಾಟಕ ಮೂಲದ ವಿಜಯ್ ಕುಮಾರ್ ಮತ್ತು ಲಕ್ಷ್ಮೀಕಾಂತ್ ಅವರನ್ನ ಬಿಡುಗಡೆ ಮಾಡಿದ್ದರು.
ಆದರೆ ಹೈದ್ರಾಬಾದ್ ನವರ ಬಿಡುಗಡೆ ಮಾಡಿದ್ದಾರಾ ಇಲ್ಲವಾ ಎಂಬುದರ ಬಗ್ಗೆ ಆತಂಕ ಉಂಟಾಗಿತ್ತು. ಇದೀಗ, ಹೈದ್ರಾಬಾದ್ ಮೂಲದ ಗೋಪಿಕೃಷ್ಣ, ಬಲರಾಮ್ ಅವರನ್ನ ಬಿಡುಗಡೆ ಮಾಡಿದ್ದಾರೆಂಬ ಮಾಹಿತಿ ಸಿಕ್ಕಿದೆ. ನಾಳೆ ಅಥವಾ ನಾಡಿದ್ದು, ಸ್ವದೇಶಕ್ಕೆ ಮರಳುವ ಸಾಧ್ಯತೆ ಇದೆ.