ರಾಷ್ಟ್ರೀಯ

ಕರಗಿ ಹೋಯ್ತು ಅಮರನಾಥ ಶಿವಲಿಂಗ

Pinterest LinkedIn Tumblr

amarಶ್ರೀನಗರ: ಅಮರನಾಥನ ದರ್ಶನ ಪಡೆದು ಪುನೀತರಾಗಬೇಕೆಂದು ಹಂಬಲಿಸುತ್ತಿದ್ದವರಿಗೊಂದು ಕಹಿ ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಅವಧಿಗೂ ಮುನ್ನವೇ ಪವಿತ್ರ ಅಮರನಾಥನ ಲಿಂಗ ದರ್ಶನ ಮುಗಿದಂತಾಗಿದೆ.

ಆ. 21ರವರೆಗೂ ಅಮರನಾಥ ದರ್ಶನ ಯಾತ್ರೆ ನಡೆಯಬೇಕಿದೆ. ಈ ಯಾತ್ರೆ ಜೂ. 21ರಿಂದ ಆರಂಭವಾಗಿದ್ದು, ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸುಮಾರು 20 ಅಡಿ ಎತ್ತರದ ಶಿವಲಿಂಗ ನಿರ್ಮಾಣವಾಗಿತ್ತು. ವಿಪರ್ಯಾಸವೆಂದರೆ ಅಮರನಾಥ ಯಾತ್ರೆ ಮುಗಿಯಲು ಇನ್ನೂ 16 ದಿನಗಳು ಬಾಕಿ ಇರುವಾಗಲೇ ಕರಗಿದೆ.

ಇದು ಸ್ವಾಭಾವಿಕವಾಗಿ ಸೃಷ್ಟಿಯಾಗುವ ಹಿಮಲಿಂಗ. ಜಾಗತಿಕ ತಾಪಮಾನ ಹೆಚ್ಚಳದಿಂದ ಇದು ಅವಧಿಗೂ ಮೊದಲೇ ಕರಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಹಾಗಾಗಿ ಇನ್ನುಮುಂದೆ ಅಮರನಾಥನ ದರ್ಶನಕ್ಕೆ ಬರುವವರು ದರ್ಶನ ಸಿಗದೇ ವಾಪಾಸ್ ಬರಬೇಕಿದೆ.

Write A Comment