ಮನೋರಂಜನೆ

25 ಸಂಸದರ ಅಮಾನತ್ತು : ಶತ್ರುಘ್ನಸಿಹ್ನಾ ಅಸಮಾಧಾನ

Pinterest LinkedIn Tumblr

saನವದೆಹಲಿ, ಆ.5-ಕಾಂಗ್ರೆಸ್‌ನ  25 ಸಂಸದರನ್ನು 5 ದಿನಗಳ ಕಾಲ ಸಸ್ಪೆಂಡ್ ಮಾಡಿರುವುದು ನನಗೆ ತೀವ್ರ ನೋವಾಗಿದೆ ಎಂದು ಬಿಜೆಪಿ ಸಂಸದ ಹಾಗೂ ಬಾಲಿವುಡ್ ನಟ ಸತ್ರುಘ್ನಸಿಹ್ನಾ ಹೇಳಿದ್ದಾರೆ.

ಸ್ಪೀಕರ್ ಸುಮಿತ್ರಾ ಅವರು ತೆಗೆದುಕೊಂಡ ನಿಲುವು ಸರಿಯಲ್ಲ ಇದರಿಂದ ಸದನಕ್ಕೆ ಸಾಕಷ್ಟು ನಷ್ಟವಾಗಿದೆ. ನನಗೂ ಕೂಡ ಈ ನಿರ್ಧಾರ ತೃಪ್ತಿ ತಂದಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸದನದಲ್ಲಿ ಅಂದು ಪಾಲ್ಗೊಳ್ಳದಿದ್ದರೂ ಕಾಂಗ್ರೆಸ್‌ನ ಕೆಲ ಸಂಸದರನ್ನು ಅಮಾನತ್ತು ಮಾಡಿದ್ದಾರೆಂದು ತಿಳಿದುಬಂದಿದೆ. ಹೀಗಾಗಿದ್ದರೆ ಅದು ಸದನದ ಗೌರವಕ್ಕೆ ಚ್ಯುತಿ ತರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Write A Comment