ರಾಷ್ಟ್ರೀಯ

ಸಂಸತ್ತಿನಲ್ಲೂ 1-2 ಉಗ್ರರಿದ್ದಾರೆ: ಮತ್ತೊಂದು ವಿವಾದದಲ್ಲಿ ಸಾಧ್ವಿ ಪ್ರಾಚಿ

Pinterest LinkedIn Tumblr

Sadhvi Prachi. Picture from her facebook account.ನವದೆಹಲಿ: ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ ಇದೀಗ ಮತ್ತೆ ಸುದ್ದಿಗೆ ಬಂದಿದ್ದು, ಸಂಸತ್ತಿನಲ್ಲಿ 1-2 ಉಗ್ರರಿದ್ದಾರೆಂದು ಗುರುವಾರ ಹೇಳಿದ್ದಾರೆ.

1993 ಮುಂಬೈ ಸರಣಿ ಸ್ಫೋಟದ ಆರೋಪಿ ಯಾಕುಬ್ ಮೆಮನ್ ಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ಕೆಲವು ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದರ ಕುರಿತಂತೆ ಇಂದು ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಭಾರತದಲ್ಲಿರುವವರೇ ಅದರಲ್ಲೂ ಸಂಸತ್ತಿನಲ್ಲಿ ಕುಳಿತಿರುವ ನಾಯಕರು ಓರ್ವ ಉಗ್ರನಿಗೆ ಗಲ್ಲು ಶಿಕ್ಷೆ ನೀಡಿರುವುದನ್ನು ತಪ್ಪು ಎಂದು ಹೇಳುತ್ತಿದ್ದಾರೆ. ಇದಕ್ಕಿಂತ ದೊಡ್ಡ ದೌರ್ಭಾಗ್ಯ ಬೇರೊಂದಿಲ್ಲ.

ಆತನೊಬ್ಬ ಉಗ್ರ ನೂರಾರು ಜನರನ್ನು ಕೊಂದಿದ್ದಾನೆಂದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಆದರೂ, ಆತನಿಗೆ ನಮ್ಮ ನಾಯಕರು ಬೆಂಬಲ ಸೂಚಿಸುತ್ತಿದ್ದಾರೆ. ಒಬ್ಬ ಉಗ್ರನಿಗೆ ಬೆಂಬಲ ಸೂಚಿಸುವವನೂ ಕೂಡ ಒಬ್ಬ ಉಗ್ರನೇ ಹಾಗಾಗಿ ಸಂಸತ್ತಿನಲ್ಲಿ 1-2 ಉಗ್ರರು ಕುಳಿತಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಉಧಂಪುರದಲ್ಲಿ ಬಂಧಿತನಾದ ಉಗ್ರ ಉಸ್ಮನ್ ಕುರಿತಂತೆ ಭದ್ರತಾ ಸಂಸ್ಥೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿರುವ ಅವರು, ವಿಚಾರಣೆ ನಡೆಸಿ ಮಾಹಿತಿ ಪಡೆದ ಬಳಿಕ ಉಗ್ರ ಉಸ್ಮನ್ ನನ್ನು ಹಿಂದು ಸಂಘಟನೆಗಳ ಕೈಗೆ ಕೊಡಿ ಸಂಘಟನೆಗಳು ಸಾರ್ವಜನಿಕವಾಗಿ ಆತನಿಗೆ ಸರಿಯಾದ ರೀತಿಯಲ್ಲಿ ಪಾಠ ಕಲಿಸುತ್ತದೆ ಎಂದು ಹೇಳಿದ್ದಾರೆ.

Write A Comment