ಮೈ ಮೇಲಿನ ಬಟ್ಟೆ ಜಾರಿದರೆ ನಾಚಿ ನೀರಾಗುವುದು ಮಾಮೂಲು. ಆದರೆ ಇಲ್ಲೊಬ್ಬ ಭೂಪ ಕಳೆದ 43 ವರ್ಷಗಳಿಂದ ಬಟ್ಟೆಯನ್ನೇ ಧರಿಸದೇ ಅಚ್ಚರಿಗೆ ಕಾರಣನಾಗಿದ್ದಾನೆ.
ಹೌದು. ಪಶ್ಚಿಮ ಬಂಗಾಳದಲ್ಲಿ ಈ ನಗ್ನ ಮಹಾಶಯ ವಾಸ ಮಾಡುತ್ತಿದ್ದು ಕಳೆದ ೪೩ ವರ್ಷಗಳಿಂದ ಈತ ನೂಲೆಳೆ ಬಟ್ಟೆಯನ್ನೂ ಹಾಕಿಲ್ಲ. ಹಾಗೆಂದು ಆತನೇನೂ ಯಾವುದೇ ದಿಗಂಬರ ಪಂಥಕ್ಕೆ ಸೇರಿದವನೂ ಅಲ್ಲ. ಆದರೆ ಮಳೆ , ಬಿಸಿಲು, ಚಳಿಯನ್ನು ಲೆಕ್ಕಿಸದೇ ಈತ ನಗ್ನನಾಗಿಯೇ ಓಡಾಡುತ್ತಾನೆ.
ವಿಶೇಷವೆಂದರೆ ಸುಬಲ್ ಬರ್ಮನ್ ಎಂಬ ಈತನನ್ನು ಸ್ಥಳೀಯರು ಅತ್ಯಂತ ಗೌರವದಿಂದ ಕಾಣುತ್ತಾರೆ. ಅಷ್ಟೇ ಅಲ್ಲ, ಇವನ ವೈಖರಿಗೆ ಅಸಹ್ಯವನ್ನೂ ಪಡುವುದಿಲ್ಲ. ಉದ್ದನೆಯ ಕೂದಲು ಹೊಂದಿರುವ ಈತನನ್ನು ನೋಡಿದರೆ ಒಬ್ಬ ಮಹಾತ್ಮನಂತೆ ಕಾಣುತ್ತಾನೆ ಎನ್ನುತ್ತಾರೆ ಸ್ಥಳೀಯರು.
ಅಂದ ಹಾಗೆ ಆತನಿಗೆ ಬಟ್ಟೆ ಹಾಕಿದರೆ ಅಲರ್ಜಿಯಂತೆ. ಒಮ್ಮೆ ಬಟ್ಟೆ ಧರಿಸಿದಾಗ ಅನಾರೋಗ್ಯಕ್ಕೆ ಒಳಗಾಗಿದ್ದನಂತೆ. ಹಾಗಾಗಿ ಈ ಪುಣ್ಯಾತ್ಮ ಬಟ್ಟೆ ಧರಿಸುವುದನ್ನೇ ಬಿಟ್ಟಿದ್ದಾನೆ.