ಶಾಲಾ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣದ ಕುರಿತು ಕೇಳಿದ್ದೀರಿ. ಇನ್ನು ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಕ್ಕೆ ಲೆಕ್ಕವೇ ಇಲ್ಲ.! ಆದರೆ ಇಲ್ಲೊಬ್ಬ ಕಾಮುಕ ಏಳು ತಿಂಗಳ ಆಕಳ ಕರುವಿನ ಮೇಲೆ ಅತ್ಯಾಚಾರ ನಡೆಸಿ ತನ್ನ ವಿಕೃತ ಕಾಮವನ್ನು ಪ್ರದರ್ಶಿಸಿದ್ದಾನೆ.
ಹೌದು. ಇಲ್ಲಿನ ಅಹಮದ್ಗಢ ಸಮೀಪದ ಮಂಡಂಗ್ಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು 25 ವರ್ಷ ವಯಸ್ಸಿನ ದಿನೇಶ್ ಎಂಬುವವನು ಏಳು ತಿಂಗಳ ಕರುವಿನ ಮೇಲೆ ಅತ್ಯಾಚಾರ ಎಸಗಿ, ಗ್ರಾಮಸ್ಥರು ಆತನನ್ನು ಹಿಡಿದು ಥಳಿಸಲು ಮುಂದಾಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಕುರಿತು ಆಕಳ ಕರುವಿನ ಮಾಲಿಕ ಸುಖ್ಪಾಲ್ ಪೊಲೀಸರಿಗೆ ದೂರು ನೀಡಿದ್ದು ಆರೋಪಿಯ ವಿರುದ್ದ ಭಾರತೀಯ ದಂಡ ಸಂಹಿತೆ 377ನೇ ವಿಧಿಯನ್ವಯ ಪ್ರಕರಣ ದಾಖಲಿಸಿಕೊಂದ ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.