ಪೂಜೆ ಮಾಡಿ ಚಿನ್ನದ ನಾಣ್ಯ ನೀಡುತ್ತೇನೆ ಎಂದು ಮಂತ್ರವಾದಿಯೊಬ್ಬ ಅತ್ತೆ ಹಾಗೂ ಸೊಸೆ ಇಬ್ಬರನ್ನೂ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಹರಜ್ ಠಾಣಾ ವ್ಯಾಪ್ತಿಯ ರಗಡ್ ಜಂಗ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಇಲ್ಲಿಯೇ ವಾಸವಾಗಿರುವ 65 ವರ್ಷದ ಬಂಬಂ ಎಂಬ ಹೆಸರಿನ ಮಾಂತ್ರಿಕ ಅತ್ತೆ ಸೊಸೆ ಇಬ್ಬರಿಗೂ ಪೂಜೆ ಮಾಡಿ ಚಿನ್ನದ ನಾಣ್ಯ ನೀಡುವ ಆಮಿಷ ಒಡ್ಡಿದ್ದಾನೆ. ಅಲ್ಲದೇ ಪೂಜೆ ಮಾಡುವ ನೆಪದಲ್ಲಿ ಇಬ್ಬರನ್ನೂ ಸರಯೂನದಿಯ ದಂಡೆಯ ಬಳಿ ಕರೆದೊಯ್ದಿದ್ದಾನೆ.ನಂತರ ಪೂಜೆ ಮಾಡುವಾಗ ನಿಯಮವಿದ್ದು ಇಬ್ಬರೂ ಬಟ್ಟೆ ಬಿಚ್ಚಿ ಎಂದು ತಿಳಿಸಿ ಇಬ್ಬರನ್ನೂ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.
ಈ ಕುರಿತಂತೆ ಮನೆಗೆ ಬಂದ ಅತ್ತೆ, ಸೊಸೆ ವಿಷಯ ತಿಳಿಸಿದ್ದು ಮನೆಯವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕ ಮಾಂತ್ರಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.