ರಾಷ್ಟ್ರೀಯ

ಅಮರನಾಥನ ದರ್ಶನ ಪಡೆದ 3,33,507 ಯಾತ್ರಾರ್ಥಿಗಳು

Pinterest LinkedIn Tumblr

amaಜಮ್ಮು, ಆ.7- ಭಾರೀ ಬಿಗಿಭದ್ರತೆ ನಡುವೆ 306 ಯಾತ್ರಾರ್ಥಿಗಳ ತಂಡ ಪವಿತ್ರ ಕ್ಷೇತ್ರ ಅಮರನಾಥಯಾತ್ರೆಗೆ ತೆರಳಿದೆ. 154 ಪುರುಷರು, 43 ಮಹಿಳೆಯರು, 8 ಮಕ್ಕಳು ಹಾಗೂ 101 ಸಾಧುಗಳು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.7 ವಾಹನಗಳಲ್ಲಿ ಭಗವತಿನಗರ ಪ್ರದೇಶದಿಂದ

ಬೆಳಗ್ಗೆ 4.50ರ ಸುಮಾರಿಗೆ ಇವರೆಲ್ಲರೂ ಪ್ರಯಾಣ ಬೆಳೆಸಿದರು.ಯಾತ್ರಾರ್ಥಿಗಳಿಗೆ ಭಾರೀ ಭದ್ರತೆ ಕಲ್ಪಿಸಲಾಗಿದೆ. ಇಲ್ಲಿಯವರೆಗೆ ಒಟ್ಟು  3,33,507 ಯಾತ್ರಾರ್ಥಿಗಳು ಅಮರನಾಥನ ದರ್ಶನ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Write A Comment