ರಾಷ್ಟ್ರೀಯ

ಹುಡುಗಿಗೆ ಬಂದ ಆ ಮಿಸ್ ಕಾಲ್ ಕುಟುಂಬದ ಮುಖ್ಯಸ್ಥನನ್ನೇ ಬಲಿ ಪಡೆಯಿತು

Pinterest LinkedIn Tumblr

killಪಶ್ಚಿಮ ಬಂಗಾಳ: ಆಕೆಯಿನ್ನೂ 14 ವರ್ಷದ ಅಪ್ರಾಪ್ತ ಬಾಲಕಿ. ಮುದ್ದಿನ ಮಗಳೆಂಬ ಕಾರಣಕ್ಕಾಗಿ ತಂದೆ ಆಕೆಗೆ ಮೊಬೈಲ್ ಫೋನ್ ಕೊಡಿಸಿದ್ದರು. ತಿಂಗಳ ಹಿಂದೆ ಮೊಬೈಲಿಗೆ ಬಂದ ಮಿಸ್ ಕಾಲ್ ಒಂದು ಈಗ ಆಕೆಯ ತಂದೆಯ ಸಾವಿಗೆ ಕಾರಣವಾಗಿದೆ.

ಪಶ್ಚಿಮ ಬಂಗಾಳದ ಸಿಲಿಗುರಿ ಬಳಿಯ ಗ್ರಾಮವೊಂದರ ಬಾಲಕಿಯ ಮೊಬೈಲಿಗೆ ತಿಂಗಳ ಹಿಂದೆ ಮಿಸ್ ಕಾಲ್ ಬಂದಿದೆ. ಯಾರ ಕಾಲ್ ಇರಬಹುದೆಂಬ ಕುತೂಹಲಕ್ಕೆ ಆಕೆ ವಾಪಾಸ್ ಕರೆ ಮಾಡಿದ್ದಾಳೆ. ಅತ್ತ ಕಡೆಯಿಂದ ಮಾತನಾಡಿದ ಯುವಕ ಫೋನಿನಲ್ಲೇ ಪರಿಚಯಿಸಿಕೊಂಡಿದ್ದಾನೆ. ಆದಾದ ನಂತರ ಬಾಲಕಿಯೊಂದಿಗೆ ನಿತ್ಯ ಮಾತನಾಡುತ್ತಾ ಆಕೆಯನ್ನು ಪ್ರೀತಿಸುತ್ತಿರುವ ನಾಟಕವಾಡಿದ್ದಾನಲ್ಲದೇ ತನ್ನ ವಂಚನಾ ಜಾಲಕ್ಕೆ ಕೆಡವಿಕೊಂಡಿದ್ದಾನೆ.

ಆತನ ಮರುಳು ಮಾತಿಗೆ ಬೆರಗಾದ ಮುಗ್ದ ಹುಡುಗಿ ಜುಲೈ 14 ರಂದು ಆತನನ್ನು ಭೇಟಿ ಮಾಡುವ ಸಲುವಾಗಿ ಮನೆಯಲ್ಲಿ ಯಾರಿಗೂ ವಿಷಯ ತಿಳಿಸದೇ ಕೂಚ್ ಬೆಹರ್ ಎಂಬ ನಗರಕ್ಕೆ ತೆರಳಿದ್ದಾಳೆ. ಅಲ್ಲಿ ಆಕೆಯನ್ನು ಭೇಟಿ ಮಾಡಿದ ಫೋನ್ ಮಾಡಿ ಮಾತನಾಡುತ್ತಿದ್ದ ಪಿಂಟೋ ಎಂಬಾತ ಬಾಲಕಿಯನ್ನು ಕರೆದುಕೊಂಡು ಹೋಗಿ ತನ್ನ ಸ್ನೇಹಿತರ ಜೊತೆ ಸೇರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಬಳಿಕ ಬಾಲಕಿಯನ್ನು ವೇಶ್ಯಾಗೃಹವೊಂದಕ್ಕೆ ಮಾರಾಟ ಮಾಡಿದ್ದು, ಬಾಲಕಿ ಅಲ್ಲಿ ನಿತ್ಯ ನರಕ ಯಾತನೆಯನ್ನನುಭವಿಸಿದ್ದಾಳೆ. ಇತ್ತ ಮಗಳು ಕಾಣದ ಕಾರಣ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಕೊನೆಗೂ ಆಕೆಯನ್ನು ಪತ್ತೆ ಹಚ್ಚಿದ ಪೊಲೀಸರು ವೇಶ್ಯಾವಾಟಿಕೆ ಗೃಹದಿಂದ ಆಕೆಯನ್ನು ರಕ್ಷಿಸಿದ್ದಾರೆ. ಅಲ್ಲದೇ ನಡೆದ ವಿಷಯವನ್ನು ಬಾಲಕಿ ಮೂಲಕ ಅರಿತುಕೊಂಡಿದ್ದಾರೆ. ತನ್ನ ಮಗಳು ಇಷ್ಟು ದಿನ ವೇಶ್ಯಾಗೃಹದಲ್ಲಿದ್ದಳೆಂಬುದನ್ನು ಅರಗಿಸಿಕೊಳ್ಳಲಾಗದ ತಂದೆ ಗ್ರಾಮದಲ್ಲಿ ತಲೆ ಎತ್ತಿ ತಿರುಗಲಾಗದ ಪರಿಸ್ಥಿತಿ ಬರುತ್ತದೆಂಬ ಕಾರಣಕ್ಕಾಗಿ ಈಗ ನೇಣಿಗೆ ಶರಣಾಗಿದ್ದಾರೆ. ಬಾಲಕಿಯನ್ನು ವಂಚಿಸಿದ ಮೂವರನ್ನು ಪೊಲೀಸರು ಬಂಧಿಸಿರುವರಾದರೂ ತಿಳಿಯದೇ ಮಗಳು ಮಾಡಿದ ತಪ್ಪಿಗೆ ತಂದೆ ಬಲಿಯಾದಂತಾಗಿದೆ.

Write A Comment