ರಾಂಚಿ (ಜಾರ್ಖಂಡ್),ಆ.8-ಮಾಟ-ಮಂತ್ರ ಮಾಡುತ್ತಿದ್ದಾರೆ ಎಂದು ಶಂಕಿಸಿದ ಸ್ಥಳೀಯರು ಐವರು ಮಹಿಳೆಯರನ್ನು ಹೊಡೆದು ಕೊಂದಿರುವ ಪೈಶಾಚಿಕ ಕೃತ್ಯವೊಂದು ಜಾರ್ಖಂಡ್‌ನ ರಾಂಚಿ ಜಿಲ್ಲೆ ಕಾಂಜಿಯಾ ಎಂಬ ಹಳ್ಳಿಯೊಂದರಲ್ಲಿ ನಡೆದಿದೆ.
ಕೆಲವು ಗ್ರಾಮಸ್ಥರು ಲಾಠಿಗಳು ಹಾಗೂ ಹರಿತವಾದ ಆಯುಧಗಳನ್ನು ಬಳಸಿ ಇಂದು ಬೆಳಗಿನ ಜಾವ ಈ ಐವರೂ ಮಹಿಳೆಯರನ್ನು ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಾಜ್‌ಕುಮಾರ್ ಲಕ್ರ ಹೇಳಿದ್ದಾರೆ.
ಮಾಯ-ಮಾಟದ ಹೆಸರಿನಲ್ಲಿ 2013ರ ವರ್ಷದ ಅವಧಿಯಲ್ಲಿ ಜಾರ್ಖಂಡ್ ರಾಜ್ಯದಾದ್ಯಂತ 54 ಮಂದಿ ಮಹಿಳೆಯರನ್ನು ಕೊಲ್ಲಲಾಗಿದ್ದು, 2001 ರಿಂದ ಈಚೆಗೆ ಒಟ್ಟು 400 ಮಂದಿ ಮಹಿಳೆಯರನ್ನು ಹೊಡೆದು ಸಾಯಿಸಲಾಗಿದೆ.