ರಾಷ್ಟ್ರೀಯ

ಕಾಲ್‌ಗರ್ಲ್‌‍ಳೊಂದಿಗೆ ಸೆಕ್ಸ್‌ನಲ್ಲಿ ಭಾಗಿಯಾಗಿ ಸಿಕ್ಕಿ ಬಿದ್ದ ಸಾರಥಿ ಬಾಬಾ

Pinterest LinkedIn Tumblr

babaಜೈಪುರ್: ಕೇಂದ್ರಾಪುರಾ ಆಶ್ರಮದಲ್ಲಿ ಬಂಧಿತನಾದ ಸ್ವಯಂಘೋಷಿತ ದೇವಮಾನವ ಸಾರಥಿ ಬಾಬಾ, ಐಷಾರಾಮಿ ಹೋಟೆಲ್‌ನಲ್ಲಿ ಮಹಿಳೆಯೊಂದಿಗೆ ಸೆಕ್ಸ್‌ನಲ್ಲಿ ಭಾಗಿಯಾಗಿದ್ದ ಎಂದು ಅಪರಾಧ ದಳದ ಪೊಲೀಸರು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.

ಎಂಐ ರಸ್ತೆಯಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದ ಸಾರಥಿ ಭಾಬಾ, ನಂತರ ಕೋಲ್ಕತಾಗೆ ತೆರಳಿದ್ದನು ಎಂದು ಮೂಲಗಳು ತಿಳಿಸಿವೆ.

ಕಾಲ್‌ಗರ್ಲ್‌ಳೊಂದಿಗೆ ಸೆಕ್ಸ್‌ನಲ್ಲಿ ಭಾಗಿಯಾದ ಬಾಬಾ, ನಂತರ ಚಿಕನ್ ಸೂಪ್ ಕುಡಿದು ಊಟ ಮಾಡಿ ನಂತರ ರೂಮ್ ಖಾಲಿ ಮಾಡಿ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹೈದ್ರಾಬಾದ್‌ನಲ್ಲೂ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿನಿಯೊಂದಿಗೆ ಹೋಟೆಲ್‌ನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಹೋಟೆಲ್‌ನಲ್ಲಿದ್ದ ಸಿಸಿಟಿವಿಯಿಂದಾಗಿ ನಕಲಿ ಸಾರಥಿ ಬಾಬಾ ಕೃತ್ಯಗಳು ಬಹಿರಂಗವಾಗಿವೆ.

ಏತನ್ಮಧ್ಯೆ, ಸಾರಥಿ ಬಾಬಾ ವಿರುದ್ಧ ಹೊರಿಸಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಅವರನ್ನು ಬಂಧನದಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಬಾಬಾ ಭಕ್ತರು ಆಶ್ರಮದ ಹೊರಗೆ ಧರಣಿ ನಡೆಸುತ್ತಿದ್ದಾರೆ.

Write A Comment