ಲಕ್ನೋ:ಸ್ಮಾರ್ಟ್‌ಫೋನ್ ಖರೀದಿಸುವ ಮಹಾದಾಸೆಯಿಂದ ಮೂವರು ಹದಿಹರೆಯದ ಯುವಕರು ಹಣಕ್ಕಾಗಿ ರಕ್ತದಾನ ಮಾಡಿದ ಘಟನೆ ವರದಿಯಾಗಿದೆ.
ಉತ್ತರಪ್ರದೇಶದ ಆರೋಗ್ಯ ಅಧಿಕಾರಿಗಳು ಬ್ಲಡ್‌ಬ್ಯಾಂಕ್ ಮೇಲೆ ದಾಳಿ ಮಾಡಿದಾಗ ಮೂವರು ಅಪ್ರಾಪ್ತ ಬಾಲಕರು ಪ್ರತಿ ಯುನಿಟ್‌ಗೆ 500 ರೂಪಾಯಿ ಹಣಕ್ಕಾಗಿ ರಕ್ತದಾನ ಮಾಡಿರುವುದು ಬಹಿರಂಗವಾಗಿದೆ. ಮೂವರು ಬ್ಲಡ್ ಬ್ಯಾಂಕ್ ಸಿಬ್ಬಂದಿಗಳನ್ನು ಬಂಧಿಸಿ ಬ್ಲಡ್‌ಬ್ಯಾಂಕ್ ಸೀಲ್ ಜಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಮಾರ್ಟ್‌ಫೋನ್ ಖರೀದಿಸಲು ಅಲ್ಪಸ್ವಲ್ಪ ಹಣ ಉಳಿತಾಯ ಮಾಡುತ್ತಿದ್ದೆ. ಒಂದು ದಿನ ಬ್ಲಡ್ ಬ್ಯಾಂಕ್ ಏಜೆಂಟ್ ನನ್ನನ್ನು ಭೇಚಿಯಾಗಿ ರಕ್ತದಾನ ಮಾಡಿ ಹಣ ಪಡೆಯಬಹುದು ಎಂದು ಹೇಳಿದಾಗ ನಾನು ಒಪ್ಪಿಕೊಂಡಿದ್ದೆ ಎಂದು ಹದಿಹರೆಯದ ಬಾಲಕ ಅಧಿಕಾರಿಗಳಿಗೆ ವಿವರಣೆ ನೀಡಿದ್ದಾನೆ.
ಮತ್ತೊಬ್ಬ ಬಾಲಕನ ತಂದೆ ನಾಲ್ಕು ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದಾನೆ. ತಾಯಿ ಕ್ಲಿನಿಕ್‌ನಲ್ಲಿ ಕೆಲಸ ಮಾಡಿ ಮಾಸಿಕ 3000 ರೂಪಾಯಿಗಳನ್ನು ಸಂಪಾದಿಸುತ್ತಾಳೆ. ಬಾಲಕ ಗಾರ್ಮೆಂಟ್ ಶಾಪ್‌ನಲ್ಲಿ ಕೆಲಸ ಮಾಡಿ 2 ಸಾವಿರ ರೂಪಾಯಿ ಸಂಪಾದಿಸುತ್ತಿದ್ದರೂ ಐದು ಜನರಿರುವ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ ಎಂದಿದ್ದಾನೆ.
ಆದ್ದರಿಂದ ಬ್ಲಡ್‌ಬ್ಯಾಂಕ್ ಏಜೆಂಟ್ ಘಜ್ನಿ ರಕ್ತದಾನ ಮಾಡಿದರೆ ದುರ್ಬಲತೆ ಕಾಡುವುದಿಲ್ಲ ಹಣ ನೀಡುತ್ತೇವೆ ಎಂದು ಆಮಿಷವೊಡಿದ್ದ. ಆದ್ದರಿಂದ ರಕ್ತದಾನ ಮಾಡಿದ್ದೇವೆ ಎಂದು ಬಾಲಕರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.