ಗಯಾ(ಬಿಹಾರ್): ಕಳೆದ 15 ವರ್ಷಗಳಿಂದ ಬಿಹಾರ್ ಜಂಗಲ್ ರಾಜ್ ರಾಜ್ಯವಾಗಿ ಪರಿವರ್ತನೆಗೊಂಡಿದೆ ಎಂದಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬಿಹಾರ್ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆಗಸ್ಟ್ 9 ರಂದು ಮಹಾತ್ಮ ಗಾಂಧಿ ಬ್ರಿಟಿಷರನ್ನು ದೇಶ ಬಿಟ್ಟು ತೊಲಗಿ ಎಂದು ಕರೆ ನೀಡಿದ್ದರು. ಬಿಹಾರ್ ಜನತೆ ಕೂಡಾ ಇಂದು ಜಂಗಲ್ ರಾಜ್ ಅಂತ್ಯಗೊಳಿಸುತ್ತೇವೆ ಎಂದು ಘೋಷಿಸಿ ಎನ್‌ಡಿಎ ಸರಕಾರವನ್ನು ಅಧಿಕಾರಕ್ಕೆ ತರುವ ಪಣ ತೊಡಬೇಕು ಎಂದು ಕರೆ ನೀಡಿದರು.
ಎನ್‌ಡಿಎ ಸರಕಾರ ದೇಶದ ಈಶಾನ್ಯ ಭಾಗವನ್ನು ಅಭಿವೃದ್ಧಿಪಡಿಸಬೇಕು ಎಂದು ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು. ಮೋದಿಜಿಯವರು ರಾಜ್ಯದ ಪ್ರತಿಯೊಂದು ಗ್ರಾಮಕ್ಕೆ ನೀರು, ವಿದ್ಯುತ್, ಉದ್ಯೋಗ ಕೊಡಬೇಕು ಎಂದು ಬಯಸಿದ್ದಾರೆ. ಬಿಹಾರ್ ಅಭಿವೃದ್ಧಿಯಾಗಬೇಕು ಎನ್ನುವುದೇ ಮೋದಿ ಕನಸಾಗಿದೆ ಎಂದು ತಿಳಿಸಿದ್ದಾರೆ.