ರಾಷ್ಟ್ರೀಯ

ಸಂಸತ್‌ನಲ್ಲಿ ವಿಪಕ್ಷಳ ನಡುವೆ ಒಡಕು

Pinterest LinkedIn Tumblr

parನವದೆಹಲಿ, ಆ.10- ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜೀನಾಮೆಗೆ ಪಟ್ಟು ಹಿಡಿದು ಸಂಸತ್‌ನ ಉಭಯ ಸದನಗಳಲ್ಲಿ ಇಂದೂ ಕೂಡ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಗದ್ದಲ ನಡೆಯಿತು.
ಇಂದಿನ ವಿಶೇಷ ಬೆಳವಣಿಗೆ ಎಂದರೆ ಈವರೆಗೆ ಕಾಂಗ್ರೆಸ್ ಹೋರಾಟಕ್ಕೆ ಬೆಂಬಲ ನೀಡಿದ್ದ ಸಮಾಜವಾದಿ ಪಕ್ಷ ಸಂಸತ್ ಕಾರ್ಯಕಲಾಪಗಳು ನಡೆಯ ಬೇಕು. ಅವರ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ ಎಂದು ತಿರುಗೇಟು ನೀಡಿದೆ. ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ

ಕಳೆದ 5 ದಿನಗಳಿಂದ ಅಮಾನತುಗೊಂಡಿದ್ದ ಕಾಂಗ್ರೆಸ್ 25 ಸಂಸದರು ಇಂದು ಸದನಕ್ಕೆ ಆಗಮಿಸಿದ್ದರು. ಕಪ್ಪು ಪಟ್ಟಿ ಧರಿಸಿ ನಾಮಫಲಕಗಳನ್ನು ಹಿಡಿದುಕೊಂಡು ಬಂದರು.ಐಪಿಎಲ್ ಹಗರಣದ ರೂವಾರಿ ಲಲಿತ್ ಮೋದಿಗೆ ಕಾನೂನು ಬಾಹಿರವಾಗಿ ನರವು ನೀಡಿರುವ ಸುಷ್ಮಾ ಸ್ವರಾಜ್, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರರಾಜೇ,  ವ್ಯಾಪಂ ಹಗರಣದಲ್ಲಿ ಸಿಲುಕಿರುವ ಮಧ್ಯಪ್ರದೇಶದ ಸಿಎಂ ಶಿವರಾಜ್‌ಸಿಂಗ್ ಚವ್ಹಾಣ್ ರಾಜೀನಾಮೆ ನೀಡಬೇಕೆಂದು ಕೋಲಾಹಲ ಎಬ್ಬಿಸಿದರು.

ಈ ಹಂತದಲ್ಲಿ ಆಡಳಿತ ಮತ್ತುಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಕೋಲಾಹಲ ಉಂಟಾಯಿತು. ಸ್ಪೀಕರ್ ಸುಮಿತ್ರಾ ಮಹಾಜನ್ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದರೂ ಕೋಲಾಹಲ ಉಂಟಾಗಿದ್ದರಿಂದ ಸದನವನ್ನು ಮಧ್ಯಾಹ್ನದವರೆಗೂ ಮುಂದೂಡಿ ಸರ್ವಪಕ್ಷಗಳ ಸಭೆ ಕರೆದರು.ತಿರುಗಿ ಬಿದ್ದ ಎಸ್ಪಿ: ಸ್ಪೀಕರ್ ಮಹಾಜನ್ ಕರೆದಿದ್ದ ಸರ್ವಪಕ್ಷ ಸಭೆಗೆ ಕಾಂಗ್ರೆಸ್ ಹೊರತು ಪಡಿಸಿ ಉಳಿದ ಪಕ್ಷಗಳು ಭಾಗವಹಿಸಿದ್ದರು. ಎಸ್‌ಪಿ, ಜೆಡಿಯು,

ಟಿಎಂಸಿ, ಸಿಪಿಐಎಂ ಸದಸ್ಯರು ಭಾಗವಹಿಸಿದ್ದರು.ನಮಗೆ ಸಂಸತ್ತಿನ ಕಾರ್ಯಕಲಾಪಗಳು ನಡೆಯಬೇಕು. ಕಳೆದ ಹದಿನೈದು ದಿನಗಳಿಂದ ಕಲಾಪ ನಡೆಯದೆ ಸಂಸದರ ಬಗ್ಗೆ ದೇಶದ ಜನತೆ ಬೇಸರಗೊಂಡಿದ್ದಾರೆ. ಕಾಂಗ್ರೆಸ್ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ ಎಂದು ಎಸ್‌ಪಿ ನೇತಾರ ಮುಲಾಯಮ್ ಸಿಂಗ್ ಯಾದವ್ ಸ್ಪಷ್ಟಪಡಿಸಿದರು.ಇದರಿಂದ ಮೆತ್ತಗಾದ ಕಾಂಗ್ರೆಸ್ ನಮಗೂ ಕೂಡ ಸಂಸತ್ತಿನ ಕಲಾಪ ನಡೆಯಬೇಕೆಂಬ ಕಾಳಜಿ ಇದೆ. ಆರೋಪದಲ್ಲಿ ಸಿಲುಕಿರುವ ಸುಷ್ಮಾಸ್ವರಾಜ್, ವಸುಂಧರರಾಜೇ, ಶಿವರಾಜ್‌ಸಿಂಗ್ ಚವ್ಹಾಣ್ ರಾಜೀನಾಮೆ ನೀಡಬೇಕೆಂಬ ನಮ್ಮ ಹೋರಾಟದಲ್ಲಿ ಬದಲಾವಣೆ ಇಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ತಿಳಿಸಿದರು.ಈ ಸಂದರ್ಭದಲ್ಲಿ ಗೃಹ ಸಚಿವ ರಾಜ್‌ನಾಥ್‌ಸಿಂಗ್ ಜಾರ್ಖಂಡ್‌ನ ದಿಯೋಗ್ರಾದಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ಹೇಳಿಕೆ ನೀಡಿದರು.ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು, ನಾವು ಕೂಡ ಕಲಾಪದಲ್ಲಿ  ಪಾಲ್ಗೊಳ್ಳುತ್ತೇವೆ. ಸರ್ಕಾರ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಕಾರ್ಯಕಲಾಪಗಳು ಅವಲಂಬಿತವಾಗಿವೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಖರ್ಗೆ ಹೇಳಿದರು. ರಾಜ್ಯಸಭೆಯಲ್ಲೂ ಅದೇ ಕಥೆ: ಇತ್ತ ರಾಜ್ಯಸಭೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ರಾಜೀನಾಮೆಗೆ ಪಟ್ಟು ಹಿಡಿದು ಕೋಲಾಹಲ ಸೃಷ್ಟಿಸಿದ್ದರಿಂದ ಸದನವನ್ನು ಮಧ್ಯಾಹ್ನದವರೆಗೂ ಮುಂದೂಡಲಾಯಿತು.

Write A Comment