69 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ವಿಮಾನ ಯಾನ ಸಂಸ್ಥೆಗಳು ಡಿಸ್ಕೌಂಟ್ ಘೋಷಿಸುತ್ತಿದ್ದು, ಏರ್ ಕೋಸ್ಟಾ ಪ್ರತಿ ಟಿಕೇಟ್ ಮೇಲೆ 609 ರೂ. ಡಿಸ್ಕೌಂಟ್ ನೀಡಿದ್ದರೆ ಜೆಟ್ ಏರ್ವೇಸ್ ಬರೋಬ್ಬರಿ ಆಫರ್ ನೀಡಿದೆ.
ದೇಶಿಯ ಹಾಗೂ ಅಂತರಾಷ್ಟ್ರೀಯ ಪ್ರಯಾಣದ ಟಿಕೇಟ್ ಗಳಿಗೆ ಜೆಟ್ ಏರ್ವೇಸ್ ಶೇ.30 ರಷ್ಟು ಭಾರೀ ರಿಯಾಯಿತಿ ಘೋಷಿಸಿದ್ದು, ಆಗಸ್ಟ್ 10 ರ ಇಂದಿನಿಂದ ಆಗಸ್ಟ್ 14 ರವರೆಗೆ ಟಿಕೇಟುಗಳನ್ನು ರಿಯಾಯಿತಿ ದರದಲ್ಲಿ ಬುಕ್ ಮಾಡಬಹುದಾಗಿದೆ. ಈ ಸಮಯದಲ್ಲಿ ಟಿಕೇಟ್ ಬುಕ್ ಮಾಡಿದವರು 15 ಸೆಪ್ಟೆಂಬರ್ 2015 ರಿಂದ 14 ಏಪ್ರಿಲ್ 2016 ರ ನಡುವಿನ ಅವಧಿಯಲ್ಲಿ ಪ್ರಯಾಣಿಸಬಹುದಾಗಿದೆ.
ಏರ್ ಕೋಸ್ಟಾ ಘೋಷಿಸಿರುವ 609 ರೂ. ಡಿಸ್ಕೌಂಟ್ ಟಿಕೇಟುಗಳನ್ನು ಆಗಸ್ಟ್ 10 ರ ಇಂದಿನಿಂದ ಆಗಸ್ಟ್ 14 ರವರೆಗೆ ಬುಕ್ ಮಾಡಬಹುದಾಗಿದೆ. ಪ್ರಯಾಣದ ಅವಧಿ 20, ಆಗಸ್ಟ್ 2015 ರಿಂದ 30, ಸೆಪ್ಟೆಂಬರ್ 2015 ರವರೆಗಿದ್ದು, ಒಂದು ವೇಳೆ ಪ್ರಯಾಣ ರದ್ದುಪಡಿಸಿದರೆ ಬುಕ್ ಮಾಡಿದ ಟಿಕೇಟಿನ ಹಣವನ್ನು ವಾಪಾಸ್ ಮಾಡಲಾಗುವುದಿಲ್ಲವೆಂದು ಕಂಪನಿ ತಿಳಿಸಿದೆ.