ರಾಷ್ಟ್ರೀಯ

ಸೇನಾ ಸಿಬ್ಬಂದಿಯಿಂದ ಅತ್ಯಾಚಾರ: ಗರ್ಭಿಣಿ ಮಹಿಳೆಯಿಂದ ಆರೋಪ: ಸೇನೆಯಿಂದ ಮಹಿಳೆ ವಿರುದ್ಧ ಪ್ರತಿದೂರು

Pinterest LinkedIn Tumblr

rapeಗುವಾಹಟಿ: ಬೋಡೋಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ(ಎನ್‌ಡಿಎಫ್‌ಬಿ) ಕಾರ್ಯಕರ್ತನ ಗರ್ಭಿಣಿ ಪತ್ನಿ ತನ್ನ ಮೇಲೆ ಸೇನಾ ಸಿಬ್ಬಂದಿಗಳು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪವನ್ನು ಅಲ್ಲಗಳೆದಿರುವ ಸೇನೆ, ಎನ್‌ಡಿಎಫ್‌ಬಿ ಕಾರ್ಯಕರ್ತನ ಪತ್ನಿ ಆರೋಪಕ್ಕೆ ಪ್ರತಿಯಾಗಿ ಎಫ್ಐಆರ್ ದಾಖಲಿಸಿದೆ.

ಭಾರತೀಯ ಸೇನೆಯ ಗೌರವಕ್ಕೆ ಧಕ್ಕೆ ತರಲು ಎನ್‌ಡಿಎಫ್‌ಬಿ ಕಾರ್ಯಕರ್ತನ ಪತ್ನಿ ಈ ರೀತಿ ಆರೋಪ ಮಾಡಿದ್ದಾರೆಂದು ಸೇನೆ ಆರೋಪಿಸಿದೆ. ಗರ್ಭಿಣಿ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣದ ಬಗ್ಗೆ ಅಸ್ಸಾಂ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಇಬ್ಬರು ಸೇನಾ ಸಿಬ್ಬಂದಿಗಳು ತನ್ನನ್ನು ಶಾಲಾ ಕಟ್ಟಡದೊಳಗೆ ಎಳೆದೊಯ್ದು, ಅತ್ಯಾಚಾರವೆಸಗಿದ್ದಾರೆ ಎಂದು 8 ತಿಂಗಳ ಗರ್ಭಿಣಿ ಸೇನೆ ವಿರುದ್ಧ ಆರೋಪ ಮಾಡಿದ್ದಾರೆ.

ಮಹಿಳೆ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಸೇನಾ ಸಿಬ್ಬಂದಿಗಳ ವಿರುದ್ಧ ಸೆಕ್ಷನ್ 376 (2) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಇಲಾಖೆ ವಕ್ತಾರ, ಸೇನಾ ಸಿಬ್ಬಂದಿಗಳ ವಿರುದ್ಧ ಕೇಳಿಬಂದಿರುವ ಅತ್ಯಾಚಾರದ ಆರೋಪ ಸುಳ್ಳು, ಸೇನೆ ಗೌರವಕ್ಕೆ ಧಕ್ಕೆ ಉಂಟು ಮಾಡಲು ಈ ರೀತಿಯ ಆರೋಪ ಹೊರಿಸಲಾಗಿದೆ ಎಂದು ಹೇಳಿದ್ದಾರೆ.

ಸೇನೆ ಗೌರವವನ್ನು ಹಾಳು ಮಾಡುವುದಕ್ಕಾಗಿ ಮಹಿಳೆ ಆರೋಪ ಮಾಡಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ಎನ್‌ಡಿಎಫ್‌ಬಿ ಪತ್ನಿ ವಿರುದ್ಧ ಸೇನೆ ಪ್ರತಿದೂರು ನೀಡಿದೆ.  ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳೆ ಮೇಲೆ ಯಾವುದೇ ಗಾಯಗಳಾಗಿರುವುದು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ವೈದ್ಯಕೀಯ ಪರೀಕ್ಷೆಯ ಬಗ್ಗೆ ಸಂಪೂರ್ಣ ವರದಿ ಇನ್ನಷ್ಟೇ ಬರಬೇಕಿದೆ.

Write A Comment