ದಮಾಮ್: ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಸೌದಿಅರೇಬಿಯದ ಈಸ್ಟರ್ನ್ ಪ್ರೊವಿನ್ಸ್ ನಗರಗಳಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇಶದ ಸಾರ್ವಭೌಮತೆ ಪ್ರದರ್ಶಿಸುವಂತೆ ಸೋಶಿಯಲ್ ಫೋರಮ್ ವಿನಂತಿಸಿದೆ.
ಆಗಸ್ಟ್ 15ರಂದು ರಾತ್ರಿ 8.45ಕ್ಕೆ ದಮಾಮ್ ನ ರೋಸ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿರುವುದು. ಇದರ ಭಾಗವಾಗಿ ಮಕ್ಕಳಿಂದ ದೇಶಭಕ್ತಿ ಗೀತೆ, ಸಭಿಕರಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಆಗಸ್ಟ್ 15ರಂದು ರಾತ್ರಿ 8.30ಕ್ಕೆ ಅಲ್ ಖೋಬರ್ ನ ಅಫ್ಸರ ಹೊಟೇಲ್ ಸಭಾಂಗಣದಲ್ಲೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮಕ್ಕೆ ಮುನ್ನ ಸೋಶಿಯಲ್ ಫೋರಮ್ ಕಾರ್ಯಕರ್ತರಿಂದ ಕಿರುಪ್ರಹಸನ ಪ್ರದರ್ಶನಗೊಳ್ಳಲಿರುವುದು.
ಸ್ವಾತಂತ್ರ್ಯೋತ್ಸವದ ಪೂರ್ವಭಾವಿಯಾಗಿ ಆಗಸ್ಟ್ 14ರಂದು ಮುಂಜಾನೆ 5 ಗಂಟೆಗೆ 30 ಗಜಗಳ 6 ಮಂದಿ ಆಟಗಾರರನ್ನೊಳಗೊಂಡ ಚುಟುಕು ಕ್ರಿಕೆಟ್ ಪಂದ್ಯಾವಳಿ ನಡೆಯಲಿರುವುದು. 10 ರಿಯಾಲ್ ಪಾವತಿಸಿ ಹೆಸರು ನೋಂದಾಯಿಸಿದ ಮೊದಲ 16 ತಂಡಗಳಿಗೆ ಮಾತ್ರ ಅವಕಾಶ. ಹೆಸರು ನೋಂದಾಯಿಸಲು ಇಚ್ಚಿಸುವವರು ಸಯೀದ್ ಅವರನ್ನು ಮೊಬೈಲ್ ಸಂ. 0564922696 ಅಥವಾ 0502216715 ನ್ನು ಸಂಪರ್ಕಿಸಬಹುದು. ವಿಜೇತರಿಗೆ ಆಗಸ್ಟ್ 15 ರಂದು ದಮಾಮ್ ನಲ್ಲಿ ನಡೆಯುವ ಸಭಾಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು.
ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಾರತೀಯ ಪ್ರಜ್ಞೆಯನ್ನು ಮೆರೆಯುವಂತೆ ಇಂಡಿಯನ್ ಸೋಶಿಯಲ್ ಫೋರಮ್ ಕೇಳಿಕೊಂಡಿದೆ.