ಮನೋರಂಜನೆ

ದೇವ ಮಹಿಳೆ ರಾಧೆ ಮಾ ಭಕ್ತರಾಗಿರುವ ಸುಭಾಷ್ ಘಾಯ್, ಪ್ರಹ್ಲಾದ್ ಕಕ್ಕರ್, ರಾಖಿ ಸಾವಂತ್, ದಲೇರ್ ಮೆಹಂದಿ…

Pinterest LinkedIn Tumblr

Radhe-Maa

ಮುಂಬೈ: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ವಾಹಿನಿಗಳಲ್ಲಿ ನಾನಾ ಕಾರಣಗಳಿಂದ ಚರ್ಚೆಯಾಗುತ್ತಿರುವ ವಿವಾದಾತ್ಮಕ ಸ್ವಯಂಘೋಷಿತ ದೇವ ಮಹಿಳೆ ರಾಧೆ ಮಾ. ಈಕೆಗೆ ಸಾಮಾನ್ಯ ಜನರಲ್ಲದೇ ವಿವಿಐಪಿ ಗಣ್ಯರು ಭಕ್ತರಾಗಿದ್ದಾರೆ.

ಕೆಲವು ದಿನಗಳ ಹಿಂದೆ ಕೆಂಪು ಟೋಪಿ, ಮಿನಿ ಸ್ಕರ್ಟ್ ಧರಿಸಿ ಭಾರಿ ಮೇಕಪ್‍ನಲ್ಲಿ ರಾಧೇ ಮಾ ಇರುವ ಒಂದು ಫೋಟೋ ಅಂತರ್‍ಜಾಲದಲ್ಲಿ ಹರಿದಾಡುವ ಮೂಲಕ ದೇಶದೆಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿದೆ.

ರಾಧೆ ಮಾಳ ನಿಜವಾದ ಹೆಸರು ಸುಖ್ವಿನ್ದರ್ ಕೌರ್ ಎಂದು ಹೇಳಲಾಗುತ್ತಿದೆ. ಈ ‘ಆಧ್ಯಾತ್ಮಿಕ ಗುರು’ ವಿರುದ್ಧ ವರದಕ್ಷಿಣೆ ಕಿರುಕುಳ, ಹಣ ವಸೂಲಿ ಆರೋಪ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿವೆ. ನಾನೇ ದೇವರು ಎಂದು ಭಕ್ತರನ್ನು ನಂಬಿಸುತ್ತಿದ್ದ ಈ ಮಹಿಳೆ ಪ್ರಕರಣ ದಾಖಲಾದ ಬಳಿಕ ನನಗೆ ಪೊಲೀಸ್, ಮಾಧ್ಯಮ ಮತ್ತು ಕಾನೂನಿನ ಬಗ್ಗೆ ಗೌರವ ಇದೆ. ದೇವರು ನನ್ನ ಜೊತೆ ಇದ್ದಾರೆ ಎಂದು ಹೇಳಿದ್ದಾಳೆ.

ಸಾಮಾನ್ಯ ಜನತೆ ಮಾತ್ರವೇ ಅಲ್ಲದೇ ರಾಜಕೀಯ ನಾಯಕರು, ಸಿನಿಮಾ ತಾರೆಯನ್ನು ರಾಧೆ ಮಾ ಪರವಾಗಿ ನಿಂತು ವಕಾಲತ್ತು ವಹಿಸುತ್ತಾ ಈಕೆಯ ಹಿಂಬಾಲಕರಾಗಿದ್ದಾರೆ. ಅದರಲ್ಲಿ ಏಳು ಖ್ಯಾತನಾಮರ ಪಟ್ಟಿ ಇಲ್ಲಿದೆ.

ಸುಭಾಷ್ ಘಾಯ್: ಚಿತ್ರ ನಿರ್ಮಾಪಕ ಸುಭಾಷ್ ಘಾಯ್ ರಾಧೆ ಮಾ ಭಕ್ತರಾಗಿದ್ದು, ಈ ಪ್ರಕರಣ ಭುಗಿಲೆದ್ದ ಕೂಡಲೇ ಫೇಸ್‍ಬುಕ್‍ನಲ್ಲಿ ಆಕೆಗೆ ಬೆಂಬಲವನ್ನು ಸುಚಿಸಿದ್ದರು. ನಾನು ಮತ್ತು ನನ್ನ ಪತ್ನಿ ಮುಕ್ತ ಕಳೆದೊಂದು ವರ್ಷದಿಂದ ರಾಧೆ ಮಾ ಭಕ್ತರಾಗಿದ್ದು, ಅವರ ಆಶಿರ್ವಾದವನ್ನು ಪಡೆದಿದ್ದೇವೆ. ನಮ್ಮ ಮನೆಯ ಬಳಿ ಇರುವ ಒಂದು ಮಠಕ್ಕೆ ರಾಧೆ ಮಾರನ್ನು ಆಹ್ವಾನಿಸಿದ್ದೆವು. ಅವರು ಬಂದು ತಮ್ಮ ಭಕ್ತರಿಗೆ ಶುಭಹಾರೈಸಿ, ಪೋಷಕರ ಪ್ರೀತಿಯನ್ನು ನೀಡಿದ್ದರು ಎಂದು ಘಾಂಯ್ ಬರೆದುಕೊಂಡಿದ್ದರು.

ಪ್ರಹ್ಲಾದ್ ಕಕ್ಕರ್: ರಾಧೆ ಮಾ ಬಲವಾಗಿ ನಂಬುವ ಪ್ರಖ್ಯಾತ ಜಾಹೀರಾತು ಗುರು ಪ್ರಹ್ಲಾದ್ ಕಕ್ಕರ್. ಸಾಧುಗಳು ಏಕೆ ಸ್ಟೈಲ್ ಮಾಡಬಾರದು, ಏಕೆ ಖಾವಿಯನ್ನೆ ಧರಿಸಬೇಕು ಎಂದು ಪ್ರಶ್ನಿಸಿದ್ದರು. ರಾಧೆ ಮಾ ತಮ್ಮನ್ನು ಬಿಂಬಿಸಿಕೊಳ್ಳುವ ರೀತಿ ಇದು ಎಂದು ಹೇಳುವ ಮೂಲಕ ಸಮರ್ಥನೆ ನೀಡಿದ್ದರು.

ರಾಖಿ ಸಾವಂತ್: ವಿವಾದಿತ ನಟಿ ರಾಖಿ ಸಾವಂತ್ ನಾನು ರಾಧೆ ಮಾ ಅವರನ್ನು ಗೌರವಿಸುತ್ತೇನೆ. ನನಗೆ ಅವಶ್ಯವಿದ್ದಾಗ ಅವರು ಸಕಾರಾತ್ಮಕ ಶಕ್ತಿ ತುಂಬಿದ್ದಾರೆ ನಾನು ಗೌರವಿಸುತ್ತೇನೆ. ವಿವಾದಗಳು ಹೆಸರು ಗಳಿಸಿದ್ದವರಿಗೆ ಸಹಜ ಎಂದಿದ್ದಾಳೆ.

ಗಜೇಂದ್ರ ಚೌಹಾಣ್: ಪುಣೆಯಲ್ಲಿರುವ ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಮುಖ್ಯಸ್ಥ, ಸದ್ಯ ತನ್ನ ಹುದ್ದೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಗಜೇಂದ್ರ ಚೌಹಾಣ್ ರಾಧೆ ಮಾ ಅನುಯಾಯಿ ಆಗಿದ್ದಾರೆ.

ದಲೇರ್ ಮೆಹಂದಿ: ಖ್ಯಾತ ಪಂಜಾಬಿ ಗಾಯಕ ದಲೆರ್ ಮೆಹಂದಿ ಕೂಡ ರಾಧೆ ಮಾ ಆಶೀರ್ವಾದ ಪಡೆದಿದ್ದು, ಬಲವಾಗಿ ಅವರನ್ನು ನಂಬುತ್ತಾರೆ.

ಮನೋಜ್ ತಿವಾರಿ: ನಟ, ಗಾಯಕ ಮತ್ತು ಬಿಜೆಪಿ ಮುಖಂಡ ಮನೋಜ್ ತಿವಾರಿ ಕೂಡ ರಾಧೆ ಮಾ ಆಯೋಜಿಸುವ ಸಮಾರಂಭಗಳಲ್ಲಿ ಯಾವಾಗಲು ಕಾಣಿಸಿಕೊಳ್ಳುತ್ತಾರೆ.

ರವಿ ಕಿಶನ್, ರಜನಿಕಾಂತ್: ಬಿಗ್ ಬಾಸ್‍ನ ಸ್ಪರ್ಧಿ ಮತ್ತು ನಟ ರವಿ ಕಿಶನ್, ಬೋಜ್ ಪುರಿ ಸಿನಿಮಾ ಕಲಾವಿದ ರಜನಿಕಾಂತ್ ಕೂಡ ರಾಧೆ ಮಾ ಅನುಯಾಯಿಗಳು.

Write A Comment