ವೇಶ್ಯೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧಿತರಾಗಿದ್ದ ನಾಲ್ಕು ಯುವಕರನ್ನು ಖುಲಾಸೆಗೊಳಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
ಲೈಂಗಿಕ ಸುಖ ಪಡೆದು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ವೇಶ್ಯೆಯೊಬ್ಬಳು ಆರೋಪಿಯೊಬ್ಬನನ್ನು ಭೇಟಿಯಾಗಲು ಹೋಟೆಲ್ ದ್ವಾರಕಾಗೆ ತೆರಳಿದ್ದ ಸಮಯದಲ್ಲಿ ಆತ ಹಾಗೂ ಆತನ ಮೂವರು ಸ್ನೇಹಿತರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೇಟ್ಟಿಲೇರಿದ್ದಳು.
ಈ ಕುರಿತು ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ತಾನು ವೇಶ್ಯೆಯಾಗಿದ್ದು ಆರೋಪಿ ಯುವಕರು ಲೈಂಗಿಕ ಸುಖ ಪಡೆದು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಆ ನಾಲ್ಕು ಮಂದಿ ಯುವಕರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದೇನೆ ಎಂದು ಮಹಿಳೆ ಒಪ್ಪಿಕೊಂಡಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲವಾದ್ದರಿಂದ ಎಲ್ಲಾ ಆರೋಪಿಗಳು ಬಿಡುಗಡೆಗೊಳ್ಳಲು ಅರ್ಹರಾಗಿದ್ದಾರೆ ಎಂದು ತೀರ್ಮಾನಿಸಿದ ನ್ಯಾಯಾಲಯ ಆರೋಪಿಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.