ರಾಷ್ಟ್ರೀಯ

ಏಳು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಕಾಮುಕ ಅರೆಸ್ಟ್

Pinterest LinkedIn Tumblr

rappeನರ್ಸರಿ, ಪ್ರೈಮರಿ ಸ್ಕೂಲ್ ಗೆ ಹೋಗುತ್ತಿದ್ದ ಏಳು ಪುಟ್ಟ ಬಾಲಕಿಯರ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ಹರಿಯಾಣದಲ್ಲಿ ನಡೆದಿದೆ.

ಇಲ್ಲಿನ ಯಮುನಾನಗರದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು ನರ್ಸರಿಯಿಂದ ನಾಲ್ಕನೇ ತರಗತಿವರೆಗಿನ ಈ ಮಕ್ಕಳಿಗೆ ಕಾಮುಕ ಯುವಕನೊಬ್ಬ ಚಾಕ್ಲೆಟ್ ನೀಡುವ ಆಮಿಷವೊಡ್ಡಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ದೂರು ಸಲ್ಲಿಸಿದ್ದು ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಕಾಮುಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆಯ ನಂತರ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೇ ಕಳುಹಿಸಿರಲಿಲ್ಲ ಎನ್ನಲಾಗಿದ್ದು ಇದರಿಂದ ಹಲವು ಅನುಮಾನಗಳು ಉಂಟಾಗಿತ್ತು. ಈ ನಡುವೆ ಈ ಹೀನ ಕೃತ್ಯ ಬೆಳಕಿಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

Write A Comment