ರಾಷ್ಟ್ರೀಯ

ರಾಬರ್ಟ್ ವಾದ್ರಾ ಬಗ್ಗೆ ರಾಹುಲ್ ತಲೆ ಕೆಡಿಸಿಕೊಳ್ಳಲಿ: ಲಲಿತ್ ಮೋದಿ

Pinterest LinkedIn Tumblr

lalitಹೊಸದಿಲ್ಲಿ: ಐಪಿಎಲ್ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಮತ್ತಷ್ಟು ವಿವರಗಳನ್ನು ಬಹಿರಂಗಗೊಳಿಸಿದ್ದಾರೆ.

ರಾಜ್‌ದೀಪ್ ಸರದೇಸಾಯಿಗೆ ನೀಡಿದ ಸಂದರ್ಶನದಲ್ಲಿ ಲಲಿತ್ ಮೋದಿ ನೀಡಿದ ವಿವರಗಳನ್ನು ‘ಇಂಡಿಯಾ ಟುಡೇ’ ವರದಿ ಮಾಡಿದೆ.

‘ಕಾಂಗ್ರೆಸ್ ನಾಯಕ ಚಿದಂಬರಂ ನನ್ನಿಂದ ಸಹಾಯ ಯಾಚಿಸಿದ್ದರು. ಹಾಗೂ ಬಿಸಿಸಿಐನ ಒಂದು ವಿಭಾಗ ನನ್ನ ವಿರುದ್ಧವಿತ್ತು,’ ಎಂದು ಹೇಳಿರುವ ಲಲಿತ್, ‘ಭೂಗತ ಪಾತಕಿಗಳಿಂದ ನನಗೆ ಜೀವ ಬೆದರಿಕೆಯಿದೆ. ಛೋಟಾ ಶಕೀಲ್ ಮತ್ತು ದಾವೂದ್ ಕ್ರಿಕೆಟ್ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿದ್ದಾರೆ. ಅದರೊಂದಿಗೆ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್‌ಗೆ ಸಂಪರ್ಕವಿದೆ,’ ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಳಿಸಿದ್ದಾರೆ.

‘ಲಂಡನ್‌ನಲ್ಲಿ ರಾಹುಲ್ ಗಾಂಧಿ ನನ್ನನ್ನು ಭೇಟಿಯಾಗಿರಲಿಲ್ಲ,’ ಎಂದಿರುವ ಲಲಿತ್, ‘ರಾಹುಲ್ ಗಾಂದಿ ರಾಬರ್ಟ್ ವಾದ್ರಾ ಹಾಗೂ ಇತರೆ ಹಗರಣಗಳ ಬಗ್ಗೆ ತಲೆ ಕೆಡಿಸಿಕೊಂಡರೆ ಒಳ್ಳೆಯದು,’ ಎಂದು ಸಲಹೆ ನೀಡಿದ್ದಾರೆ.

‘ಇಂಟರ್‌ಪೋಲ್‌ ನನ್ನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿಲ್ಲ,’ ಎಂದೂ ಸ್ಪಷ್ಟಪಡಿಸಿದ್ದಾರೆ.

Write A Comment