ರಾಷ್ಟ್ರೀಯ

ಜಿಎಸ್ಟಿ ಖಂಡಿತವಾಗಿಯೂ ಜಾರಿಗೆ ಬರುತ್ತದೆ: ಪ್ರಕಾಶ್ ಜಾವದೇಕರ್

Pinterest LinkedIn Tumblr

prakash-javdekarಲಕ್ನೋ: ಯಾವುದೇ ಪ್ರಮುಖ ನಿರ್ಣಯ, ಚರ್ಚೆ ನಡೆಯದೆ ಸಂಸತ್ತಿನ ಮುಂಗಾರು ಅಧಿವೇಶನವನ್ನು ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಿದ್ದು, ಇದಕ್ಕೆ ಕಾಂಗ್ರೆಸ್ ಕಾರಣ ಅಂತ ಸರ್ಕಾರ  ಗಂಭೀರ ಆರೋಪ ಮಾಡಿದೆ.

ಮುಂಗಾರು ಅಧಿವೇಶನ ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಲು ಕಾಂಗ್ರೆಸ್ ಮತ್ತು ಎಡಪಕ್ಷಗಳೇ ಕಾರಣ. ಅವರು ಸಚಿವೆ ಸುಷ್ಮಾ  ಸ್ವರಾಜ್, ವ್ಯಾಪಂ ಹಗರಣ ಮತ್ತು ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ ವಿಷಯದಲ್ಲಿ ಕಿಡಿ ಹಚ್ಚಲು ಯತ್ನಿಸಿದರು. ಆದರೆ ಅದು ಅವರಿಗೆ ಫಲ ನೀಡಲಿಲ್ಲ ಎಂದು ಲಕ್ನೋದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ  ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವದೇಕರ್ ಹೇಳಿದರು.

ಆದರೆ ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್ಟ್ಗಿ) ಖಂಡಿತವಾಗಿಯೂ ಅನುಮೋದನೆ ಸಿಗುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.ಇದರ ಅನುಮೋದನೆಗೆ ಒಂದು ವಿಶೇಷ ಅಧಿವೇಶನವನ್ನು ಕರೆಯುವ ಸೂಚನೆಯನ್ನೂ ಅವರು ನೀಡಿದರು.

Write A Comment