ಹೈದರಾಬಾದ್: ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹು ನಿರೀಕ್ಷಿತ ಹೊಸ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರಪ್ರೇಮಿಗಳಲ್ಲಿ ಸಂಚಲನ ಮೂಡಿಸಿದೆ.
ಪವನ್ ಚಿತ್ರ ಸೆಟ್ಟೇರಿದರೆ ಸಾಕು, ಅವರ ಅಭಿಮಾನಿಗಳಿಗೆ ಹಬ್ಬ ಬಂದಂತೆ. ಹೀಗೆ ಪವನ್ ಅಭಿನಯದ ಹಿಂದಿನ ಚಿತ್ರ ‘ಗಬ್ಬರ್ ಸಿಂಗ್’ ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ನಂತರ ಬಂದ ‘ಅತ್ತಾರಿಂಟಿಕಿ ದಾರೇದಿ’ ಕೂಡ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಹಿಂದಿಯಲ್ಲಿ ಬಂದಿದ್ದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಎವರ್ ಗ್ರೀನ್ ಚಿತ್ರ ‘ದಬಾಂಗ್’ ನ ರಿಮೇಕ್ ‘ಗಬ್ಬರ್ ಸಿಂಗ್’. ಗಬ್ಬರ್ ಸಿಂಗ್ ತೆಲುಗಿನ ಪ್ರೇಕ್ಷಕರನ್ನು ಸೆಳೆದಿತ್ತು.
ನಂತರ ರಾಜಕೀಯಕ್ಕೂ ಹೋಗಿ ಬಂದಿದ್ದರು ಪವನ್. ಈಗ ಹಲವು ದಿನಗಳ ನಂತರ ಅಭಿಮಾನಿಗಳನ್ನು ರಂಜಿಸಲು ಮತ್ತೆ ಬರುತ್ತಿದ್ದಾರೆ. ‘ಸರ್ದಾರ್ ಗಬ್ಬರ್ ಸಿಂಗ್’ ಪಾತ್ರದಲ್ಲಿ ಪ್ರೇಕ್ಷಕರನ್ನು ಮತ್ತೊಮ್ಮೆ ಸೆಳೆಯಲಿದ್ದಾರೆ. ಮಗಧೀರನ ರಾಣಿ ಕಾಜಲ್ ಅಗರ್ ವಾಲ್ ಹಾಗೂ ಶರದ್ ಕೇಳ್ಕರ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಕೆ. ಎಸ್. ರವೀಂದ್ರ ಚಿತ್ರ ನಿರ್ದೇಶನ ಮಾಡಿದ್ದಾರೆ. ‘ಸರ್ದಾರ್ ಗಬ್ಬರ್ ಸಿಂಗ್’ ಚಿತ್ರದ ಫಸ್ಟ್ ಲುಕ್ ವಿಭಿನ್ನವಾಗಿ ಮೂಡಿಬಂದಿದ್ದು ಪ್ರೇಕ್ಷಕರ ಮನಸೆಳೆಯಲು ರೆಡಿಯಾಗಿದೆ.