ಹೊಸದಿಲ್ಲಿ: ಹೃದ್ರೋಗದಿಂದ ಬಳಲುತ್ತಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪತ್ನಿ ಸುರ್ವಾ ಮುಖರ್ಜಿ ಮಂಗಳವಾರ ಬೆಳಗ್ಗೆ 10.51ಕ್ಕೆ ಕೊನೆಯುಸಿರೆಳೆದಿದ್ದಾರೆ.
ಕಳೆದ ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು, ಆದರೆ, ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ. ಪತ್ನಿಯ ಅನಾರೋಗ್ಯದ ವಿಷಯ ತಿಳಿದ ಕೂಡಲೇ ಮುಖರ್ಜಿ ಅವರು ತಮ್ಮ ಒಡಿಶಾ ಪ್ರವಾಸವನ್ನು ಮೊಟಕುಗೊಳಿಸಿ ದಿಲ್ಲಿಗೆ ದೌಡಾಯಿಸಿದ್ದರು. ಬಂಗ್ಲಾದೇಶದ ನರಹೇಲ್ ಜಿಲ್ಲೆಯಲ್ಲಿ ಸುರ್ವಾ ಮುಖರ್ಜಿ ಅವರ ಪೂರ್ವಜರು ನೆಲೆಸಿದ್ದರು.