ರಾಷ್ಟ್ರೀಯ

ಸಂಜೀವ್ ಭಟ್ ವಜಾ: ಮೋದಿ ಖಂಡಿಸಿದ ಕಾಂಗ್ರೆಸ್

Pinterest LinkedIn Tumblr

sanjeev-bhatt

ನವದೆಹಲಿ: ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಸೇವೆಯಿಂದ ವಜಾ ಮಾಡುವಂತೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಗುರುವಾರ ಕಾಂಗ್ರೆಸ್ ಪಕ್ಷ ಖಂಡಿಸಿದ್ದು ಇದು ‘ತೀವ್ರ ದುರದೃಷ್ಟಕರ’ ಎಂದಿದ್ದು, ಅಧಿಕಾರ ವರ್ಗ ತಮ್ಮ ವಿರುದ್ಧ ಹೋದರೆ ಇದೇ ಗತಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂದೇಶ ನಿಡಿದ್ದಾರೆ ಎಂದು ಟೀಕಿಸಿದೆ.

ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯೂ ಹೌದು ಹಾಗೆಯೇ ಗುಜರಾತಿನ ಮುಖ್ಯಮಂತ್ರಿಯೂ ಆಗಿರುವಂತಿದೆ ಎಂದು ಕಾಗ್ರೆಸ್ ಮುಖಂಡ ರಶೀದ್ ಆಲ್ವಿ ಹೇಳಿದ್ದಾರೆ.

“ಅವರು ಅಧಿಕಾರ ವರ್ಗಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ, ನರೇಂದ್ರ ಮೋದಿ ವಿರುದ್ಧ ಯಾರು ಮಾತನಾಡಿದರು ಅವರಿಗೆ ಇದೇ ಗತಿ” ಎಂದು ಕೂಡ ಅವರು ಹೇಳಿದ್ದಾರೆ.

೨೦೦೨ರ ಗೋಧ್ರಾ ನಂತರ ಗುಜರಾತ್ ಗಲಭೆಗಳ ಸಮಯದಲ್ಲಿ ಗುಜರಾತ್ ಸರ್ಕಾರ ಸಂಜೀವ್ ಭಟ್ ಅವರನ್ನು ಸೇವೆಗೆ ಕರೆಸಿಕೊಂಡಿತ್ತು. ಸಂಜೀವ್ ಭಟ್ ಅವರು ಗೋಧ್ರಾ ನಂತರ ಗಲಭೆಗಳಲ್ಲಿ ಸರ್ಕಾರದ ಕೈವಾಡ ಇದೆ ಎಂದು ಸರ್ಕಾರದ ವಿರುದ್ಧ ಟೀಕಿಸಿದ್ದರು ಹಾಗು ವಿಶೇಷ ತನಿಖಾ ದಳಕ್ಕೆ ಹೇಳಿಕೆಯನ್ನು ನೀಡಿದ್ದರು. ಇದರಿಂದ ಗುಜರಾತ್ ಸರ್ಕಾರ ತೀವ್ರ ಮುಖಭಂಗ ಅನುಭವಿಸಿತ್ತು. ಈಗ ಸಂಜೀವ್ ಅವರು ಸೇವೆಗೆ ಹಾಜರಾಗಿಲ್ಲ ಎಂಬ ಕಾರಣ ನೀಡಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.

ಆದರೆ ಸೇವೆಗೆ ಹಾಜರಾಗಿಲ್ಲದ ಸಮಯದಲ್ಲಿ ವಿಶೇಶ ತನಿಖಾ ದಳದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೆ ಎಂದು ಸಂಜೀವ್ ಭಟ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ೧೯೯೮ ಬ್ಯಾಚಿನ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಇದೇ ಕಾರಣ ನೀಡಿ ೨೦೧೧ರಿಂದ ಅಮಾನತ್ತಿನಲ್ಲಿ ಇಡಲಾಗಿತ್ತು.

Write A Comment