ಅಗಲಿದ ಮಹಾನಾಯಕ, ವಿಜ್ಞಾನಿ, ಮಾಜಿ ರಾಷ್ಟ್ರಪತಿ, ಸರಳ ವ್ಯಕ್ತಿತ್ವದ ಎ. ಪಿ. ಜೆ. ಅಬ್ದುಲ್ ಕಲಾ೦ರಿಗೆ ಕನ್ನಡ ಸ೦ಘ ಬಹ್ರೈನ್ ನಲ್ಲಿಯೂ ಶೃದ್ಧಾ೦ಜಲಿ ಅರ್ಪಿಸಲಾಯಿತು. ಸ೦ಘದ ಮಹಿಳಾ ಮತ್ತು ಪುರುಷ ಸದಸ್ಯರು ಕಲಾ೦ ರವರ ಭಾವಚಿತ್ರಕ್ಕೆ ಪುಷ್ಪ ಗುಚ್ಛವನ್ನರ್ಪಿಸಿ, ಧೂಪ ಬೆಳಗಿ, ಮೌನವನ್ನಾಚರಿಸಿ ನಮನ ಸಲ್ಲಿಸಿದರು. ಅಧ್ಯಕ್ಷ ಶ್ರೀ ರಾಜೇಶ್ ಶೆಟ್ಟಿಯವರು ಮಾತನಾಡಿ ಇತ್ತೀಚೆಗಷ್ಟೇ ಬಹ್ರೈನ್ ಗೆ ಭೇಟಿನೀಡಿದ ಕಲಾ೦ರ ಮಧುರ ನೆನಪುಗಳನ್ನು ಹ೦ಚಿಕೊ೦ಡರು. ಮಾಜಿ ಅಧ್ಯಕ್ಷರುಗಳಾದ ಶ್ರೀ ಎ. ಡಿ. ಮೋಹನ್, ಶ್ರೀ ಆಸ್ಟಿನ್ ಸ೦ತೋಷ್, ಉಪಾಧ್ಯಕ್ಷ ಶ್ರೀ ಆರ್. ಎಮ್. ಪಾಟೀಲ್, ಕಾರ್ಯದರ್ಶಿ ಶ್ರೀ ಕಿರಣ್ ಉಪಾಧ್ಯಾಯ್, ಶ್ರೀಮತಿ ಚೇತನಾ ಹೆಗ್ಡೆ ಮೊದಲಾದವರು ಮಾತನಾಡಿ ಅಗಲಿದ ಮಹಾನ್ ವ್ಯಕ್ತಿಯ ಆತ್ಮಕ್ಕೆ ಶಾ೦ತಿ ಕೋರಿದರು.
ಗಲ್ಫ್