ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಮೂರು ಮಂದಿ ಹಿರಿಯ ಮುಖಂಡರು ಲಿಫ್ಟ್ ನಲ್ಲಿ ಸುಮಾರು 40 ನಿಮಿಷಗಳ ಕಾಲ ಸಿಕ್ಕಿಹಾಕಿಕೊಂಡ ಘಟನೆ ಪಾಟ್ನಾ ಗೆಸ್ಟ್ ಹೌಸ್ ನಲ್ಲಿ ನಡೆದಿದೆ.
ಕಳೆದ ರಾತ್ರಿ 11.30ರ ಹೊತ್ತಿಗೆ ಶಾ ಮತ್ತು 3 ಬಿಜೆಪಿ ಮುಖಂಡರು ಗೆಸ್ಟ್ ಹೌಸ್ ನ ಮೊದಲ ಮಹಡಿಗೆ ಲಿಫ್ಟ್ ನಲ್ಲಿ ತೆರಳುತ್ತಿದ್ದ ವೇಳೆ ಜಾಮ್ ಆಗಿದ್ದು ಅದರ ಜತೆಗೆ ಅಲ್ಲಿ ಲಿಫ್ಟ್ ಆಪರೇಟರ್ಸ್ ಕೂಡಾ ಇದ್ದಿರಲಿಲ್ಲ ಎನ್ನಲಾಗಿದೆ. ಮೊಬೈಲ್ ಸಹ ಸಿಗ್ನಲ್ ಸಿಗದೇ ಅಮಿತ್ ಶಾ ಮತ್ತು ಬಿಹಾರದ ಬಿಜೆಪಿ ಪಕ್ಷದ ಭೂಪೇಂದ್ರ ಯಾದವ್, ಕಾರ್ಯದರ್ಶಿ ನಾಗೇಂದ್ರ ಮತ್ತು ಪ್ರಧಾನ ಕಾರ್ಯದರ್ಶಿ ಸೌದಾನ್ ಸಿಂಗ್ ಅಲ್ಲಿಯೇ ಪರದಾಡುವಂತಾಯಿತು.
ಈ ವಿಷಯ ತಿಳಿಯುತ್ತಿದ್ದಂತೆ ಸಿಆರ್ ಪಿಎಫ್ ಸಿಬ್ಬಂದಿಗಳು ಆಗಮಿಸಿ ಲಿಫ್ಟ್ ನ ಸ್ಟೀಲ್ ಬಾಗಿಲನ್ನು ಮುರಿದು ಶಾ ಮತ್ತು ಇನ್ನಿತರ ಮುಖಂಡರನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.