ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಎರಡನೇ ಬಾರಿ ಪ್ರಾಣ ಬೆದರಿಕೆ ಬಂದಿದ್ದು ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ‘ಝುಡ್’ ಕೆಟಗರಿ ಭದ್ರತೆಯನ್ನು ಒದಗಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಣ್ಣಾ ಹಜಾರೆ ಅವರಿಗೆ ಬಂದಿರುವ ಈ ಬೆದರಿಕೆ ಪತ್ರದಲ್ಲಿ ಲಾತೂರ್ ಜಿಲ್ಲೆಯ ಮಹಾದೇವ ಪಾಂಚಾಲ್ ಎಂಬ ಹೆಸರನ್ನು ಬರೆಯಲಾಗಿದ್ದು ಒಸ್ಮಾನ್ಬಾದ್ನಿಂದ ಅಂಚೆ ಮೂಲಕ ಕಳುಹಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ. ಇದರಲ್ಲಿ ಆಂಗ್ಲ ಭಾಷೆಯಲ್ಲಿ ಬರೆಯಲಾಗಿದ್ದು ಇದರಲ್ಲಿ ಒಂದೊಮ್ಮೆ ನೀವು ಇದೇ ರೀತಿ ಹೋರಾಟದ ಪ್ರವೃತ್ತಿ ಮುಂದುವರೆಸಿದರೆ ಹತ್ಯೆ ಮಾದುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಹಮದ್ನಗರ ಜಿಲ್ಲೆಯ ಪರ್ನೇರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ 506ನೇ ವಿಧಿಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳೆದ ಹತ್ತು ದಿನಗಳ ಹಿಂದೆ ಕೂಡಾ ಹಜಾರೆ ಅವರಿಗೆ ಇಮೇಲ್ ಬೆದರಿಕೆಯೊಂದು ಬಂದಿತ್ತು . ಇದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜೊತೆಗಿನ ಸಂಪರ್ಕ ಕಡಿದುಕೊಳ್ಳದಿದ್ದರೆ ಎರಡು ವರ್ಷಗಳ ಪುಣೆಯಲ್ಲಿ ಕೊಲೆಯಾಗಿದ್ದ ಹಿಂದೆ ಸುಧಾರಣಾವಾದಿ ನರೇಂದ್ರ ದಾಭೋಲ್ಕರ್ ಅವರಿಗೆ ಆದ ಗತಿಯೇ ನಿಮಗೂ ಆಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿತ್ತು.