ರಾಷ್ಟ್ರೀಯ

ಎ.ರಾಜಾ ಮನೆಗೆ ದಾಳಿ ನಡೆಸಿ ಬೆಚ್ಚಿ ಬಿದ್ದ ಸಿಬಿಐ ಅಧಿಕಾರಿಗಳು !

Pinterest LinkedIn Tumblr

raja2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪ ಎದುರಿಸುತ್ತಿರುವ ಮಾಜಿ ಟೆಲಿಕಾಂ ಸಚಿವ ಎ. ರಾಜಾ ಅವರ ಮನೆಗೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.

ಹೌದು. ಅಕ್ರಮ ಆಸ್ತಿಗಳಿಕೆ ಪ್ರಕರಣ ಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖಾಧಿಕಾರಿಗಳು ಎ. ರಾಜಾ ಅವರಿಗೆ ಸಂಬಂಧಿಸಿದ 24 ಕಡೆ  ದಾಳಿ ನಡೆಸಿ 1.60 ಕೋಟಿ ರೂ. ಮೌಲ್ಯದ 6 ಕೆ.ಜಿ ಚಿನ್ನ ವಶಪಡಿಸಿಕೊಂಡಿದ್ದು ಇದರಲ್ಲಿ 6 ಕೆಜಿ ಚಿನ್ನದ ಜತೆ ಬೆಲೆಬಾಳುವ ಹರಳುವಳು, 20 ಕೆ.ಜಿ. ಬೆಳ್ಳಿ ಮತ್ತು ವಿವಿಧ ಆಸ್ತಿಗಳಿಗೆ ಸಂಬಂಧಿಸಿದ 200 ಕಾಗದಪತ್ರಗಳು ಲಭ್ಯವಾಗಿವೆ ಎಂಬ ಮಾಹಿತಿ ಲಭಿಸಿದೆ.

ದಾಳಿ ವೇಳೆ ಪತ್ತೆಯಾದ ಚಿನ್ನವನ್ನು ದೆಹಲಿಯ ರಾಜಾ ಅವರ ನಿವಾಸ ಮತ್ತು ಲಾಕರ್‌ಗಳಿಂದ ವಶಪಡಿಸಿಕೊಳ್ಳಲಾಗಿದ್ದು ಇದೇ ಸಮಯದಲ್ಲಿ ನಿಶ್ಚಿತ ಠೇವಣಿ ಸ್ವೀಕೃತಿಗಳು, ಆದಾಯ ತೆರಿಗೆ ಮರುಪಾವತಿ ಮತ್ತು ಷೇರು ವರ್ಗಾವಣೆ ದಾಖಲೆಗಳನ್ನು ಕೂಡ ಸಿಬಿಐ ವಶಕ್ಕೆ ತೆಗೆದುಕೊಂಡಿದೆ.

Write A Comment