ಗ್ರಾಹಕರು ಬಂಗಾರದ ದರ ಇಳಿಕೆಯಾಗುತ್ತದೆ ಎಂಬ ಆಸೆಯಲ್ಲಿದ್ದರೆ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಮತ್ತೆ ಏರಿಕೆ ಕಾಣುವ ಮೂಲಕ ಗ್ರಾಹಕರ ನಿರೀಕ್ಷೆ ಹುಸಿಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ದರ ಏರಿಕೆ ಹಾಗೂ ಸ್ಥಳೀಯ ಆಭರಣ ತಯಾರಿಕರ ಬೇಡಿಕೆ ಹೆಚ್ಚಳದಿಂದ ಗುರುವಾರ 365 ರೂಪಾಯಿಗಳ ಏರಿಕೆ ಕಂಡು ದಿಲ್ಲಿಯಲ್ಲಿ ಪ್ರತಿ 10 ಗ್ರಾಮ್ ದರ 26,700 ರೂಪಾಯಿಯಷ್ಟಕ್ಕೆ ವ್ಯವಹಾರ ನಡೆಸಿತು.
ಈ ನಡುವೆ ಉದ್ಯಮ ವಲಯ ಮತ್ತು ನಾಣ್ಯ ತಯಾರಕರ ಕಡೆಯಿಂದ ಬೇಡಿಕೆ ಹೆಚ್ಚಾದುದರಿಂದ ಬೆಳ್ಳಿ ಕೂಡ ಪ್ರತಿ ಕೆ.ಜಿಗೆ 1,000 ರೂ. ಜಿಗಿದಿದ್ದು, 36,300 ರೂಪಾಯಿಗಳಿಗೆ ಏರಿಕೆಯಾಯಿತು.
ಅಮೆರಿಕದಲ್ಲಿ ಸೆಪ್ಟೆಂಬರ್‌ನಲ್ಲಿ ಬಡ್ಡಿ ದರಗಳ ಇಳಿಕೆ ಸಾಧ್ಯತೆ ಕ್ಷೀಣಿಸಿದ್ದು, ಅದರ ಜತೆಗೆ ಹಬ್ಬದ ಸೀಜನ್ ಆರಂಭವಾದುದರಿಂದ ಚಿನ್ನದ ದರ ಏರಿಕೆಗೆ ಕಾರಣವಾಗಿದ್ದು ಇನ್ನಷ್ಟು ಏರಿಕೆ ಕಂಡರೂ ಆಶ್ಚರ್ಯವಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.