ರಾಷ್ಟ್ರೀಯ

ಕೊಳಕ್ಕೆ ಉರುಳಿದ ಕರೆನ್ಸಿ ನೋಟುಗಳನ್ನು ಹೊತ್ತೊಯ್ಯುದ್ದ ಲಾರಿ!

Pinterest LinkedIn Tumblr

currencyನಾಗರಕೋವಿಲ್: ಮೈಸೂರಿನಿಂದ ಕೇರಳಕ್ಕೆ ಹೊಸ ಕರೆನ್ಸಿ ನೋಟುಗಳನ್ನು ಕೊಂಡೊಯ್ಯುತ್ತಿದ್ದ ಕಂಟೇನರ್-ಲಾರಿ ರಸ್ತೆಬದಿಯ ಕೊಳಕ್ಕೆ ಉರುಳಿದೆ.

ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಕೊಳಕ್ಕೆ ಬಿದ್ದ ಲಾರಿಯನ್ನು ಮೇಲೆತ್ತಿದ್ದಾರೆ. ಚಾಲಕ ಲಾರಿಯ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಈ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಬೆಂಗಾವಲಿನಲ್ಲಿ ಎರಡು ಕಂಟೇನರ್ ಲಾರಿಗಳು ತಿರುವನಂತಪುರಂ ಗೆ ತೆರಳುತ್ತಿದ್ದವು. ಕುರಿ ಮಂದೆಯನ್ನು ತಪ್ಪಿಸಲು ಹೋಗಿ ಚಾಲಕ ಲಾರಿಯ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ ಪರಿಣಾಮ ನೋಟುಗಳನ್ನು ತುಂಬಿಕೊಂಡಿದ್ದ ಲಾರಿ ಕೊಳಕ್ಕೆ ಉರುಳಿದೆ.

ಘಟನೆ ನಡೆದ ಕೂಡಲೇ  ಘಟನಾ ಸ್ಥಳ ನಾಗರಕೋವಿಲ್ ಗೆ ಧಾವಿಸಿದ ರಿಸರ್ವ್ ಬ್ಯಾಂಕ್ ನ ಅಧಿಕಾರಿಗಳು ಕಂಟೇನರ್ ತಪಾಸಣೆ ನಡೆಸಿದ್ದಾರೆ. ಜಲನಿರೋಧಕ ಪ್ಯಾಕಿಂಗ್ ಮಾಡಿದ್ದರಿಂದ ಕಂಟೇರ್ ನಲ್ಲಿದ್ದ ವಸ್ತುಗಳು ಹಾನಿಗೀಡಾಗಿರುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ. ಕಂಟೇರ್ ನಲ್ಲಿ ಕಡಿಮೆ ಮುಖಬೆಲೆಯ ನೋಟುಗಳನ್ನು ತುಂಬಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಮೂರು ಕುರಿಗಳು ಸಾವನ್ನಪ್ಪಿವೆ. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Write A Comment