ರಾಷ್ಟ್ರೀಯ

ಗೆಳೆಯನ ಸಹೋದರಿಯನ್ನೇ ಅತ್ಯಾಚಾರವೆಸಗಿದ ಕಾಮುಕ !

Pinterest LinkedIn Tumblr

RAಕಾಮುಕ ಯುವಕನೊಬ್ಬ ಗೆಳೆಯನ ಅಪ್ರಾಪ್ತ ಸಹೋದರಿಯನ್ನೇ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆಯೊಂದು ಮುಜಾಫರ್ ನಗರದಲ್ಲಿ ನಡೆದಿದೆ.

ಬಲ್ಲಾಬ್‌ಗರ್‌ನ ರಾಜೀವ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು ಮೊಹಮ್ಮದ್ ರಿಜ್ವಾನ್  ಎಂಬ ನೆರೆಮನೆಯಾತ ಅತ್ಯಾಚಾರಕ್ಕೊಳಗಾದ ಬಾಲಕಿಯ ಸಹೋದರನ ಸ್ನೇಹಿತನಾಗಿದ್ದ. ಹಾಗಾಗಿ ಅವರ ಮನೆಗೆ ಆಗಾಗ ಬರುತ್ತಿದ್ದ. ಕಳೆದ ಜುಲೈ ಹನ್ನೊಂದರಂದು ಸ್ನೇಹಿತನ ಮನೆಗೆ ಬಂದಿದ್ದ ಸಮಯದಲ್ಲಿ 15 ವರ್ಷ ವಯಸ್ಸಿನ ಬಾಲಕಿಯೊಬ್ಬಳೇ  ಮಲಗಿದ್ದಳು. ಈ ಅವಕಾಶವನ್ನು ಉಪಯೋಗಿಸಿಕೊಂಡ ಕಾಮುಕ ರಿಜ್ವಾನ್ ಆಕೆಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ನಡೆಸಿ ತನ್ನ ಕಾಮ ತೃಷೆ ತೀರಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಹೊರಗಡೆ ಹೋಗಿದ್ದ ಬಾಲಕಿಯ ತಾಯಿ ಮನೆಗೆ ಬಂದಾಗ ಈ ಆಘಾತಕಾರಿ ಘಟನೆ ನಡೆದಿರುವುದು ತಿಳಿದು ಬಂದಿದ್ದು ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾಗಿರುವ  ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment