ರಾಷ್ಟ್ರೀಯ

ಭಾರತ ಧನುರ್ವಾತ ಮುಕ್ತ: ಮೋದಿ

Pinterest LinkedIn Tumblr

modhiiiಹೊಸದಿಲ್ಲಿ, ಆ.27: ಭಾರತದಲ್ಲಿ ಶಿಶು ಜನನದ ವೇಳೆ ತಾಯಿ ಹಾಗೂ ನವಜಾತ ಶಿಶು ಟೆಟನಸ್ (ಧನುರ್ವಾತ) ಮುಕ್ತರಾ ಗಿರುತ್ತಾರೆಂದು ವಿಶ್ವ ಆರೋಗ್ಯ ಸಂಘಟನೆಯು ಘೋಷಿಸಿದೆಯೆಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೊಸದಿಲ್ಲಿಯಲ್ಲಿ ತಿಳಿಸಿದ್ದಾರೆ.
ಅವರು, ವಿಶ್ವಾದ್ಯಂತ ಶಿಶು ಹಾಗೂ ಹೆರಿಗೆ ಮರಣಗಳನ್ನು ಕಡಿಮೆಗೊಳಿಸುವ ಪರಿಕ್ರಮವಾದ-ಕಾರ್ಯಾಚರಣೆಗೆ ಕರೆ ಸಮ್ಮೇಳನ-2015ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಕಾರ್ಯಕ್ರಮವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಹಿಳೆಯರು ಹಾಗೂ ಮಕ್ಕಳಿಗೆ ಸಂಬಂಧಿಸಿದ ಆರೋಗ್ಯ ಸವಾಲುಗಳನ್ನು ನಿಭಾಯಿಸಲು ಸಹಾಯ ಮಾಡಲಿದೆಯೆಂದು ಪ್ರಧಾನಿ ಹೇಳಿದರು.
ಭಾರತದ ಪೋಲಿಯೊ ಮುಕ್ತ ಸ್ಥಾನಮಾನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಮೋದಿ, ಅನೇಕ ಭಾಗಿದಾರರ ಸಂಯುಕ್ತ ಪ್ರಯತ್ನದಿಂದಾಗಿ ಭಾರತವು ಪೋಲಿಯೊ ಮುಕ್ತವೆಂದು ಘೋಷಿ ಸಲ್ಪಟ್ಟಿದೆ. ಇಂದು ವಿಶ್ವ ಆರೋಗ್ಯ ಸಂಘಟನೆಯು ಭಾರತವನ್ನು ತಾಯಿ ಹಾಗೂ ನವಜಾತ ಶಿಶು ಧನುರ್ವಾತ ಮುಕ್ತ ದೇಶವೆಂದು ಘೋಷಿಸಿದೆಯೆಂದು ತಿಳಿಸಲು ತಾನು ಸಂತೊಷ ಪಡುತ್ತೇನೆ ಎಂದರು.
ವಿಶ್ವಾದ್ಯಂತದ 600ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಎರಡು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಿ, ಹೆರಿಗೆ ಹಾಗೂ ಶಿಶು ಮರಣ ದರವನ್ನು ಕಡಿಮೆಗೊಳಿಸುವ ಉಪಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ದಾ, ಸೆನೆಗಲ್, ದಕ್ಷಿಣ ಸುಡಾನ್, ಅಘ್ಘಾನಿಸ್ತಾನ, ಇಥಿಯೋಪಿಯ ಸಹಿತ ಹಲವು ದೇಶಗಳ ಅವರ ಸೋದ್ಯೋಗಿಗಳು ಭಾಗವಹಿಸಿದ್ದರು.
ವಿಶ್ವ ಆರೋಗ್ಯ ಸಂಘಟನೆಯ ಪ್ರಕಾರ, ಒಟ್ಟು ಜಾಗತಿಕ ಜನಸಂಖ್ಯೆಯ ಶೇ. 36ರಷ್ಟಿರುವ 24 ದೇಶಗಳಲ್ಲಿ ಶೇ. 70 ರಷ್ಟು ಶಿಶು ಹಾಗೂ ಹೆರಿಗೆ ಮರಣಗಳು ಸಂಭವಿಸುತ್ತಿವೆ.
ಮಾಲಿಯಲ್ಲಿ ಶಿಶು ಮರಣ ಪ್ರಮಾಣ ಗರಿಷ್ಠವಾಗಿದ್ದು (78), ದಕ್ಷಿಣ ಸುಡಾನ್‌ನಲ್ಲಿ ತಾಯಂದಿರ ಸಾವಿನ ಪ್ರಮಾಣ 730ರಷ್ಟಿದೆ. (ಸಾವಿರಕ್ಕೆ) ಭಾರತದಲ್ಲಿ ಶಿಶು ಮರಣ ಪ್ರಮಾಣ ಶಿಶುಮರಣ ಪ್ರಮಾಣ 40 ಹಾಗೂ ತಾಯಂದಿರ ಸಾವಿನ ಪ್ರಮಾಣ 167ರಷ್ಟಿದೆ. 1990ರಲ್ಲಿ ಅದು ಕ್ರಮವಾಗಿ 380 ಹಾಗೂ 540ರಷ್ಟಿತ್ತು.

Write A Comment