ಫಾರಿದಬಾದ್: ಅವಧಿಗೆ ಮುಂಚಿತವಾಗಿ ನಿವೃತ್ತಿ ಪಡೆದ ಸೈನಿಕರಿಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಒನ್ ರ್ಯಾಂಕ್ ಒನ್ ಪೆನ್ಷನ್ ಅನ್ವಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.
ವೈದ್ಯಕೀಯ ಅಸಾಮರ್ಥ್ಯದಿಂದ ಸೇನೆಯಲ್ಲಿ ಮುಂದುವರೆಯಲು ಸಾಧ್ಯವಾಗದೇ ಸ್ವಯಂ ನಿವೃತ್ತಿ ಪಡೆಯುವ ಸೈನಿಕರಿಗೆ ಒಆರ್ ಒಪಿ ಯೋಜನೆ ಅನ್ವಯಿಸುತ್ತದೆ. 15 -17 ವರ್ಷಗಳ ವರೆಗೆ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಸೈನಿಕರಿಗೆ ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆ ಅನ್ವಯವಾಗುವುದಿಲ್ಲ ಎಂದು ಹೇಳುತ್ತಿದ್ದಾರೆ, ಆದರೆ ಇದು ತಪ್ಪು ಎಂದು ಮೋದಿ ಸ್ಪಷ್ಟನೆ ನೀಡಿದ್ದಾರೆ.
ದೈಹಿಕವಾಗಿ ಗಾಯಗೊಂಡ ಪರಿಣಾಮ ನಿವೃತ್ತಿ ಪಡೆದಿರುವ ಸೈನಿಕರನ್ನು ಒಆರ್ ಒಪಿ ವ್ಯಾಪ್ತಿಯಿಂದ ಕೈಬಿಟ್ಟಿಲ್ಲ ಎಂದು ಮೋದಿ ಹೇಳಿದ್ದಾರೆ.