ಇಸ್ಲಾಮಾಬಾದ್ : ಯಾವುದೇ ರೀತಿಯ ಯುದ್ಧವನ್ನು ಎದುರಿಸಲು ಪಾಕಿಸ್ತಾನ ಶಕ್ತವಾಗಿದೆ ಎಂದು ಪಾಕ್ ಸೇನಾ ಮುಖ್ಯಸ್ಥ ರಹೀಲ್ ಷರಿಫ್ ತಿಳಿಸಿದ್ದಾರೆ.
ಆಂತರಿಕ ಮತ್ತು ಗಡಿ ಹೊರಗಿನ ಯಾವುದೇ ರೀತಿಯ ಬೆದರಿಕೆ ಅಥವಾ ಯುದ್ಧವನ್ನು ಎದುರಿಸಲು ಪಾಕಿಸ್ತಾನ ಸೇನೆ ಶಕ್ತವಾಗಿದೆ. ಉಪಖಂಡದಲ್ಲಿ ಶೀತಲ ಸಮರಕ್ಕೂ ಅಥವಾ ನೇರ ಯುದ್ಧಕ್ಕೂ ಸಿದ್ಧವಿರುವುದಾಗಿ ಷರೀಫ್ ತಿಳಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.
‘ಭಾರತ ಆರೋಪಿಸಿರುವಂತೆ ನಮ್ಮ ಸೇನೆ ಅಪ್ರಚೋದಿತ ದಾಳಿ ನಡೆಸುತ್ತಿಲ್ಲ. ಒಂದು ವೇಳೆ ಭಾರತ ದಾಳಿ ಮಾಡಿದರೆ ಪ್ರತಿ ದಾಳಿ ನಡೆಸಲು ನಮ್ಮ ಸೈನ್ಯ ಸಿದ್ಧವಾಗಿದೆ’ ಎಂದು ಷರೀಫ್ ತಿಳಿಸಿದ್ದಾರೆ.