ರಾಷ್ಟ್ರೀಯ

ಇಲ್ಲಿ ಹುಡುಗಿಯರಿಗೆ ಜೀನ್ಸ್ ಮೊಬೈಲ್ ಬಳಕೆ ನಿಷೇಧ !

Pinterest LinkedIn Tumblr

ban on jeans

ಮುಜಾಫರ್‌ನಗರ್, ಸೆ.21: `ಮದುವೆಯಾಗದ ಹೆಣ್ಣು ಮಕ್ಕಳು ಜೀನ್ಸ್ ತೊಡಬಾರದು, ಮೊಬೈಲ್ ಬಳಸಬಾರದು… ಹುಷಾರ್` ಎಂಬ ಕಟ್ಟಾಜ್ಞೆಯನ್ನು ಈ ಜಿಲ್ಲೆಯ ಗ್ರಾಮ ಪಂಚಾಯ್ತಿ ಹೊರಡಿಸಿದೆ.

ಮುಜಾಫರ್‌ನಗರ್ ಮತ್ತು ಸಹರಾನ್‌ಪುರ ಜಿಲ್ಲೆಗಳ 10 ಗ್ರಾಮಗಳಲ್ಲಿ ಈ ಆಜ್ಞೆ ಜಾರಿಯಲ್ಲಿದ್ದು, ಇದನ್ನು ಉಲ್ಲಂಘಿಸಿದವರನ್ನು ಮೊದಲು ವಿಚಾರಿಸಿ ಮತ್ತೊಮ್ಮೆ ಎಚ್ಚರಿಕೆ ನೀಡಲಾಗುತ್ತದೆ. ಆದರೆ ಮತ್ತೆ ಮುಂದುವರೆದರೆ ಅವರಿಗೆ ಬಹಿಷ್ಕಾರ ಹಾಕಲಾಗುತ್ತದೆ ಎಂದೂ ಬೆದರಿಸಲಾಗಿದೆ.

ಈ ಜಿಲ್ಲೆಗಳಲ್ಲಿಯ ಗ್ರಾಮ ಪಂಚಾಯ್ತಿಗಳು ಭಾರಿ ಪ್ರಭಾವ ಹೊಂದಿದ್ದು, ಸಣ್ಣ ಪುಟ್ಟ ಕಳ್ಳತನದಿಂದ ಮದುವೆ ವಿಷಯಗಳವರೆಗೆ ಇವು ತೀರ್ಪು ನೀ‌ಡುತ್ತವೆ.

ಮಹಿಳೆಯರ ವಿರುದ್ಧ ಅಪರಾಧ ತಗ್ಗಿಸಲು ಮತ್ತು ಸಮಾಜದಲ್ಲಿ ಶಾಂತಿ- ಕಾನೂನು ವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಇಂತಹ ಆಜ್ಞೆ ಹೊರಡಿಸಲಾಗಿದೆ ಎಂದು ಪಂಚಾಯ್ತಿಗಳು ತಮ್ಮ ಆಜ್ಞೆಯನ್ನು ಸಮರ್ಥಿಸಿಕೊಂ‌ಡಿವೆ.

Write A Comment