ಗುವಾಹಟಿ: ಗರ್ಭಿಣಿಯಾದ ತಪ್ಪಿಗೆ ಅಸ್ಸಾಂನ ಆಸ್ಪತ್ರೆಯಲ್ಲಿ ನೌಕರಿಗಿದ್ದ ನರ್ಸ್ ಒಬ್ಬಳನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಇದೆಂಥ ಅನ್ಯಾಯ ಅಂತ ಕೇಳ್ತೀರಾ? ಪೂರ್ತಿ ಸುದ್ದಿ ಓದಿ. ಈಕೆ ಒಂದೋ ಎರಡೋ ಮೂರೋ ಬಾರಿ ಗರ್ಭಿಣಿಯಾಗಿಲ್ಲ. ಬರೋಬ್ಬರಿ 85 ಬಾರಿ ಗರ್ಭಿಣಿಯಾಗಿದ್ದಾಳೆ!
ಅರೆ, ಅದು ಆಕೆಯ ಸಾಮರ್ಥ್ಯ ಅಂತ ನಿಮ್ಮ ವಾದವಾ? ಮುಂದೆ ಓದುತ್ತಾ ಹೋಗಿ. ಈಕೆಯ ಹೆಸರು ಲಿಲಿ ಬೇಗಮ್ ಸರ್ಕಾರ್. ಕರೀಮ್ಗಂಜ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್. ವಯಸ್ಸು 51. ಈಕೆ 85 ಬಾರಿ ಗರ್ಭಿಣಿಯಾಗಿದ್ದೇನೆಂಬ ಸುಳ್ಳು ದಾಖಲೆ ನೀಡಿ ಪ್ರತಿ ಬಾರಿ ರು. 500 ಹೆರಿಗೆ ಭತ್ಯೆಯಂತೆ ರು. 42,500 ಪಡೆದಿದ್ದಾಳೆ.
ವರ್ಷಕ್ಕೆ ಒಂದೋ ಎರಡೋ ಸುಳ್ಳು ದಾಖಲೆ ಸೃಷ್ಟಿಸಿದ್ದರೂ ಬಚಾವಾಗಿ ಬಿಡುತ್ತಿದ್ದಳೇನೋ. ಆ ತಾಳ್ಮೆಬುದ್ಧಿವಂತಿಕೆ ತೋರದ ಕಳೆದ 6 ತಿಂಗಳಲ್ಲಿ 85 ಬಾರಿ ಗರ್ಭಿಣಿಯಾಗಿರುವ ದಾಖಲೆ ನೀಡಿದ್ದಾಳೆ. ಈ ಜಾಲವನ್ನು ಸುಲಭವಾಗಿಯೇ ಬೇಧಿಸಿದ ಮೇಲಧಿ ಕಾರಿಗಳು ಈಕೆಯನ್ನು ಕಳೆದವಾರ ಅಮಾನತುಗೊಳಿಸಿದ್ದಾರೆ.