ರಾಷ್ಟ್ರೀಯ

50,000ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಖಾಯಂಗೊಳಿಸುತ್ತಿದೆ ದೆಹಲಿ ಸರ್ಕಾರ

Pinterest LinkedIn Tumblr

deದೆಹಲಿ: ದೆಹಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ 50,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಖಾಯಂ ಮಾಡುವ ಪ್ರಕ್ರಿಯೆಗೆ ಆಪ್ ಸರ್ಕಾರ ಚಾಲನೆ ನೀಡಿದೆ.

‘ದೆಹಲಿ ಆಡಳಿತ ಸೇವೆಗಳ ಇಲಾಖೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ‘ಅರ್ಹ’ ಅಭ್ಯರ್ಥಿಗಳನ್ನು ಖಾಯಂ ನೌಕರರಾಗಿ ನೇಮಿಸಿಕೊಳ್ಳುವ ಪ್ರಸ್ತಾವನೆಯನ್ನು ಅಂಗೀಕರಿಸಿದೆ’, ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾಲಿ ಇರುವ ಹುದ್ದೆಗಳನ್ನು ತುಂಬಲು ಯೋಜನೆಯನ್ನು ಸಿದ್ಧಪಡಿಸಲು ಸರ್ಕಾರ ಎಲ್ಲಾ ಇಲಾಖೆಗಳಿಗೆ ನಿರ್ದೇಶಿಸಿದೆ.

ನಿಯಮಗಳ ಪ್ರಕಾರ ಗುತ್ತಿಗೆ ನೌಕರರು ಖಾಯಂ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸುವಾಗ ಕೆಲವು ಸಡಿಲಿಕೆಗಳು ಇರುತ್ತವೆ.

Write A Comment