ರಾಷ್ಟ್ರೀಯ

ಲಡಾಕ್ ಕೌನ್ಸಿಲ್ ಎಲೆಕ್ಷನ್‌ನಲ್ಲಿ ಬಿಜೆಪಿಗೆ ಪ್ರಚಂಡ ಜಯ, ಒಳ್ಳೆಯ ಬೆಳವಣಿಗೆ: ಜವಡೇಕರ್

Pinterest LinkedIn Tumblr

Prakash-Javadekarನಾಗ್ಪುರ: ಜಮ್ಮು ಮತ್ತು ಕಾಶ್ಮೀರದ ಲೇಹ್‌ ಹಿಲ್‌ ಕೌನ್ಸಿಲ್‌ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಗೆದ್ದಿರುವುದು ಒಂದು ಅತ್ಯುತ್ತಮ ಸೂಚನೆಯಾಗಿದ್ದು, ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಕೂಡ ಬಿಜೆಪಿ ವಿಜಯ ಸಾಧಿಸಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

26 ಸದಸ್ಯ ಬಲದ ಲಡ್ಡಾಕ್‌ ಸ್ವಾಯತ್ತ ಪರ್ವಾತಾಭಿವೃದ್ದಿ ಮಂಡಳಿಯ ಲೇಹ್‌ ಹಿಲ್‌ ಕೌನ್ಸಿಲ್‌ಗೆ ನಡೆದಿರುವ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡು ಪ್ರಚಂಡ ಐತಿಹಾಸಿಕ ವಿಜಯವನ್ನು ದಾಖಲಿಸಿತ್ತು. ಈ ಹಿಂದೆ 2010ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಕೇವಲ 4 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ 22 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿತ್ತು. ಆದರೆ ಇದೀಗ ಬಿಜೆಪಿಯ ಪ್ರಚಂಡ ಜಯ ನಮಗೆ ಹೆಚ್ಚು ಬಲ ತಂದಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ – ನ್ಯಾಶನಲ್‌ ಕಾನ್ಫರೆನ್ಸ್‌ ಅಧಿಕಾರಾವಧಿಯ ವೇಳೆ ಅಭಿವೃದ್ಧಿಯಿಂದ ಸಂಪೂರ್ಣವಾಗಿ ವಂಚಿತರಾಗಿದ್ದ ಲೇಹ್‌ ಪರ್ವತ ಪ್ರಾಂತ್ಯದ ಜನರು ಇದೇ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾಕ್ಕೆ ತಂದಿರುವುದು ಐತಿಹಾಸಿಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರಕಾರವು ಲೇಹ್‌ ನಿಂದ ತೊಡಗಿ ಅಂಡಮಾನ್‌ ವರೆಗೂ ಅಭಿವೃದ್ಧಿಯನ್ನು ಬಯಸುವ ಜನರ ಬೆಂಬಲ ಪಡೆದು ಪ್ರಶಂಸೆಗೆ ಪಾತ್ರವಾಗಿದೆ ಎಂದು ಜಾವಡೇಕರ್‌ ಹೇಳಿದರು. ಜಮ್ಮು ಕಾಶ್ಮೀರದ ಲೇಹ್‌ ಪರ್ವತ ಪ್ರಾಂತ್ಯದಲ್ಲಿ ಬಹುಪಾಲು ನಿವಾಸಿಗಳು ಬೌದ್ಧ ಧರ್ಮೀಯರಾಗಿದ್ದಾರೆ.

Write A Comment