ರಾಷ್ಟ್ರೀಯ

ಮೀಸಲಾತಿ ವಿರುದ್ಧ ನಿತೀಶ್ ಕುಮಾರ್-ಲಾಲು ಪ್ರಸಾದ್ ಏನು ಮಾಡಲು ಹೋಗಿದ್ದರು ! ಈ ಬಗ್ಗೆ ಪ್ರಧಾನಿ ಮೋದಿ ಹೇಳಿರುವುದು ಇಲ್ಲಿದೆ…

Pinterest LinkedIn Tumblr

modi-nitish-lalu

ಮಧುಬನಿ/ಕಟೀಹಾರ್: ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಲು ಅನುಕೂಲವಾಗುವಂತೆ ಮೀಸಲು ನೀತಿಯಲ್ಲಿ ಪರಿಶೀಲನೆಗೆ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ 2005ರ ಜುಲೈಯಲ್ಲಿ ಕೋರಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

2005ರ ಜುಲೈ 23ರಂದು ಈ ಇಬ್ಬರೂ ನಾಯಕರು ಪರಸ್ಪರ ವೈರಿಗಳಾಗಿದ್ದರೂ ಜತೆಯಾಗಿ, ಧರ್ಮದ ಆಧಾರದಲ್ಲಿ ಮೀಸಲು ನೀಡುವಂತೆ ಕೋರಿದ್ದರು. ಆದರೆ ಇದು ಸಂವಿಧಾನ ನಿರ್ಮಾತೃಗಳಾದ ಡಾ.ಅಂಬೇಡ್ಕರ್, ರಾಜೇಂದ್ರಪ್ರಸಾದ್ ಜವಾಹರಲಾಲ ನೆಹರು, ವಲ್ಲಭಭಾಯಿ ಪಟೇಲ್ ಮುಂತಾದವರ ಆಶಯಕ್ಕೆ ವಿರುದ್ಧವಾಗಿತ್ತು. ಈಗ ಇವರಿಬ್ಬರಿಗೆ ಮಾತಾಡಲು ಬೇರೆ ವಿಷಯಗಳಿಲ್ಲವಾದ್ದರಿಂದ ನಮ್ಮ ಮೀಸಲು ನೀತಿಯ ಬಗ್ಗೆ ಸುಳ್ಳು ಆರೋಪ ಮಾತಾಡುತ್ತಿದ್ದಾರೆ. ಆದರೆ ಯಾವುದೇ ರಾಜಕೀಯ ಪಕ್ಷಕ್ಕೂ ಸಂವಿಧಾನದಲ್ಲಿ ಅಂಬೇಡ್ಕರ್ ದುರ್ಬಲ ವರ್ಗಗಳಿಗೆ ನೀಡಿರುವ ಮೀಸಲನ್ನು ರದ್ದುಪಡಿಸುವ ಅಧಿಕಾರವಿಲ್ಲ ಎಂದು ಮೋದಿ ಹೇಳಿದ್ದಾರೆ.

ಲಾಲುಪ್ರಸಾದ್ ಮತ್ತು ನಿತೀಶ್‍ರ ಮೂಲಕ `ಜಂಗಲ್‍ರಾಜ್’ ಆಗಿದ್ದ ಬಿಹಾರಕ್ಕೆ ಮಾಟಮಂತ್ರದ ಅವಳಿ ಸಿಕ್ಕಿದೆ. ಇಬ್ಬರೂ ಸೇರೆ ರಾಜ್ಯವನ್ನು ನಾಶ ಮಾಡಲಿದ್ದಾರೆ. ಅಧಿಕಾರ ಪಡೆಯಲು ಪ್ರಜಾಪ್ರಭುತ್ವ ನೆರವಾಗಬಹುದೇ ಹೊರತು ಮಾಟ ಮಂತ್ರವಲ್ಲ ಎಂದು ನಿತೀಶರನ್ನು ಮೋದಿ ಛೇಡಿಸಿದರು. ಬಿಹಾರದ ಜನತೆ ಎನ್‍ಡಿಎಯನ್ನು ಭರವಸೆಯ ಕಿರಣವಾಗಿ ಕಾಣುತ್ತಿದ್ದಾರೆ. ಬಿಹಾರದಿಂದ ಉದ್ಯೋಗ ಅರಸಿ ಹೊರಗೆ ಹೋಗುತ್ತಿರುವ ಯುವಜನತೆ ಹಿಂದುಳಿಯುವಿಕೆಯ ಕುಳಿಗೆ ತಳ್ಳಲ್ಪಡುತ್ತಿದ್ದಾರೆ. ಸರ್ಕಾರ ಬದಲಾಗಿದ್ದಲ್ಲದೆ ಈ ಪರಿಸ್ಥಿತಿ ಬದಲಾಗದು. ರಾಜ್ಯದ ಬಡ ಸ್ಥಿತಿಗೆ ಬಿಹಾರದ ಮುಖಂಡರೇ ಕಾರಣ ಎಂದರು.

Write A Comment