ಅಂತರಾಷ್ಟ್ರೀಯ

ಭೂಗತ ಪಾತಕಿ ಛೋಟಾ ರಾಜನ್ ನಾಳೆ ಭಾರತಕ್ಕೆ

Pinterest LinkedIn Tumblr

Bali: Indian fugitive Rajendra Sadashiv Nikalje, known in India as "Chotta Rajan," center, is escorted by police officers for questioning in Bali, Indonesia, Thursday, Oct 29, 2015. The alleged organized crime boss, wanted for alleged involvement in several mafia killings and other major crimes in his homeland, was arrested Sunday after arriving at Bali's airport from Sydney based on information from Interpol and Australian authorities. AP/PTI(AP10_29_2015_000148A)

ಬಾಲಿ: ಭೂಗತ ಪಾತಕಿ ಛೋಟಾ ರಾಜನ್ ನನ್ನು ನಾಳೆ ಭಾರತಕ್ಕೆ ಕರೆತರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇಂಡೋನೇಷ್ಯಾದಲ್ಲಿ ಬಂಧನಕ್ಕೊಳಗಾರಿವ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ಛೋಟಾ ರಾಜನ್ ನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ನಿನ್ನೆ ಅಲ್ಲಿಗೆ ಭಾರತದ ತನಿಖಾ ತಂಡದ ಜಂಟಿ ನಿಯೋಗ ತೆರಳಿತ್ತು.

ಇಂಡೋನೇಶ್ಯಾದಿಂದ ನೇರವಾಗಿ ದೆಹಲಿಗೆ ಕರೆತರಲಿದ್ದು, ನಂತರ ಮುಂಬೈಗೆ ಕರೆದೊಯ್ದು, ಆರ್ಥುರ್ ರೋಡ್ ಜೈಲಿನಲ್ಲಿರಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

ಛೋಟಾ ರಾಜನ್ ಭಾರತಕ್ಕೆ ಕರೆ ತರುವ ಹಿನ್ನಲೆಯಲ್ಲಿ ಮುಂಬೈನ ಆರ್ಥುರ್ ರೋಡ್ ಜೈಲು ಸುತ್ತಾಮುತ್ತಾ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಭೂಗತ ಪಾತಕಿ ದಾವೂದ್ ಇಬ್ರಾಹೀಂ ತಂಡದಿಂದ ಛೋಟಾ ರಾಜನ್ ಮೇಲೆ ದಾಳಿ ನಡೆಯುವ ಸಾಧ್ಯತೆಗಳು ಹೆಚ್ಚು ಕಂಡು ಬಂದಿರುವುದರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದೆ. 55ರ ಹರೆಯದ ಡಾನ್ ಛೋಟಾ ರಾಜನ್ ಮೇಲೆ ಕೊಲೆ, ಸುಲಿಗೆ, ಡ್ರಗ್ ಮಾಫಿಯಾ ಸೇರಿದಂತೆ ಸುಮಾರು 70 ಪ್ರಕರಣಗಳಿವೆ.

Write A Comment