ಮನೋರಂಜನೆ

ಈ ತಿಂಗಳ ಕೊನೆಯಲ್ಲಿ ಯುವರಾಜ್ ಸಿಂಗ್ ನಿಶ್ಚಿತಾರ್ಥ ! ಯಾರ ಜೊತೆ ಗೊತ್ತೇ…?

Pinterest LinkedIn Tumblr

yuvraj-singh-hazel-keech

ಮುಂಬೈ: ಮೊನ್ನೆ ತಾನೇ ಕ್ರಿಕೆಟರ್ ಹರ್ಭಜನ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಹಿಂದೆಯೇ ರೋಹಿತ್ ಹಾಗೂ ವಿರಾಟ್ ಮದುವೆ ಪ್ಲಾನ್ ಮಾಡಿದ್ದಾರೆ. ಈ ನಡುವೆ ಯುವರಾಜ್ ಸಿಂಗ್ ಸದ್ದಿಲ್ಲದೇ ನಿಶ್ಚಿತಾರ್ಥ ತಯಾರಿ ನಡೆಸಿದ್ದಾರೆ.

ಪಂಜಾಬ್ ಕಿಂಗ್ ಯುವರಾಜ್ ಸಿಂಗ್ ಬಾಲಿವುಡ್ ನಟಿ ಹಝೀಲ್ ಕೀಚ್ ಜೊತೆಗೆ ಹಸೆಮಣೆ ಏರಲು ಎಲ್ಲಾ ಯೋಜನೆ ಮಾಡಿಕೊಂಡಿದ್ದಾರೆ. ಇದೇ ತಿಂಗಳ ಕೊನೆಯಲ್ಲಿ ಯುವಿ ನಿಶ್ಚಿತಾರ್ಥ ಸಮಾರಂಭವಿದೆ ಎನ್ನುವ ಮಾತುಗಳು ಬಲ್ಲಾ ಮೂಲಗಳಿಂದ ಕೇಳಿಬರುತ್ತಿದೆ. ಆದರೆ ಯುವಿ ತಮ್ಮ ಮದುವೆ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಹಝೀಲ್ ಮತ್ತು ಯುವಿ ಬಹುದಿನಗಳಿಂದ ಡೇಟಿಂಗ್ ನಡೆಸುತ್ತಿದ್ದು, ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕೇವಲ ಹತ್ತಿರ ಸಂಬಂಧಿಗಳು ಮತ್ತು ಗೆಳೆಯರನ್ನು ಕರೆದಿರುವುದಾಗಿ ಹೇಳಲಾಗುತ್ತಿದೆ. ಯುವಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಕೆಲವು ದಿನಗಳ ಹಿಂದೆಯಷ್ಟೇ ಮಂಗಳೂರಿನ ಮೊಡಂಕಾಪು ದೇವಸ್ಥಾನಕ್ಕೆ ಬಂದಿದ್ದರು.

ಕೆಲ ದಿನಗಳ ಹಿಂದೆ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ನಡುವಿನ ಟ್ವಿಟ್ಟರ್ ಮಾತುಕತೆಯ ವೇಳೆ ದೀಪಾವಳಿಯ ನಂತರ ನನ್ನ ಮದುವೆ ಎಂದು ಯುವರಾಜ್ ಟ್ವೀಟ್ ಮಾಡಿದ್ದರು.

Write A Comment