ಅಂತರಾಷ್ಟ್ರೀಯ

ಲಂಡನ್ ನಲ್ಲಿ 90ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಭಾರತೀಯ ಮೂಲದ ದಂಪತಿ

Pinterest LinkedIn Tumblr

panjabicouple

ಲಂಡನ್‌: ಲಂಡನ್‌ನಲ್ಲಿ ನೆಲೆಸಿರುವ, ಭಾರತೀಯ ಮೂಲದ ಶತಾಯುಷಿಗಳಾದ ಕರಮ್‌ (110) ಮತ್ತು ಕರ್ತಾರಿ ಚಾಂದ್‌ (103) ದಂಪತಿ ಶನಿವಾರ ಇಲ್ಲಿ ತಮ್ಮ 90ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ವಿಶ್ವದ ಅತ್ಯಂತ ಹಿರಿಯ ದಂಪತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಪಂಜಾಬ್‌ ಮೂಲದ ಇವರು 1925ರ ಡಿಸೆಂಬರ್‌ 11ರಂದು ವಿವಾಹವಾಗಿದ್ದರು. ಆಗ ಕರಮ್‌ಗೆ 20 ವರ್ಷ, ಚಾಂದ್‌ಗೆ 13 ವರ್ಷ. 1965ರಲ್ಲಿ ಇವರು ಲಂಡನ್‌ಗೆ ಹೋಗಿ ನೆಲೆಸಿದ್ದರು. ಸದ್ಯ ಇವರ ಕುಟುಂಬ ಪಶ್ಚಿಮ ಯಾರ್ಕ್‌ಶೈರ್‌ನ ಬ್ರ್ಯಾರ್ಡ್‌ಫೋರ್ಡ್‌ನಲ್ಲಿ ನೆಲೆಸಿದೆ. ಈ ದಂಪತಿಗೆ 8 ಮಕ್ಕಳು, 27 ಮೊಮ್ಮಕ್ಕಳು, 23 ಮರಿ ಮೊಮ್ಮಕ್ಕಳು ಇದ್ದಾರೆ.

‘ಮದುವೆಯಾಗಿ ಇಷ್ಟು ವರ್ಷಗಳ ಕಾಲ ಸಂತೋಷದಿಂದ ಜತೆಗಿದ್ದೇವೆ. ನಿಜಕ್ಕೂ ಇದೊಂದು ವರ’ ಎಂದು ಕರಮ್‌ ಹೇಳಿದ್ದಾರೆ.

‘ತಾತ– ಅಜ್ಜಿ ಯಾವತ್ತೂ ಜಗಳ ಆಡಿದ್ದನ್ನು ಕಂಡಿಲ್ಲ. ಒತ್ತಡ ರಹಿತ ಜೀವನವೇ ಅವರ ದಾಂಪತ್ಯದ ಗುಟ್ಟು’ ಎಂದು ಕರಮ್‌ ಅವರ ಮೊಮ್ಮಗ ಪಾಲ್‌ ಹೇಳಿದ್ದಾರೆ. ‘ದ ಸನ್‌’ ಪತ್ರಿಕೆಯಲ್ಲಿ ಇವರ ಸಂದರ್ಶನ ಪ್ರಕಟಗೊಂಡಿದೆ.

Write A Comment